Saturday, July 03, 2004

FrontPage magazine.com :: How the West Grew Rich by Dinesh D'Souza

FrontPage magazine.com :: How the West Grew Rich by Dinesh D'Souza
ಈ ಲೇಖನದ ಲೇಖಕ "oreo" ಅಥವಾ "coconut" ಎಂದು ಖ್ಯಾತನಾದವನು. ಇದರ ಅರ್ಥವೇನೆಂದರೆ ಮೇಲುಗಡೆ ಕಪ್ಪು ಚರ್ಮವಿದ್ದರೂ ಒಳಗಡೆಯ ಯೋಚನೆಗಳೆಲ್ಲಾ ಯೂರೋಪಿಯನ್ನರ ತೆರ, ತಾನು ಯೂರೋಪಿಯನ್ನರಂತೆ ಎನ್ನುವ ಹುಸಿ ಹಮ್ಮು. ಇವನನ್ನು ಹೀಗೇಕೆ ಕರೆಯುತ್ತಾರೆಂದು ಈ ಒಂದು ಲೇಖನವನ್ನು ಓದಿದರೆ ಸಾಕು, ಚೆನ್ನಾಗಿ ಅರ್ಥವಾಗುತ್ತದೆ.

ನನ್ನ ಹಿಂದಿನ ಒಂದು ಬ್ಲಾಗ್ ನಲ್ಲಿ ಜಪಾನ್ ಮತ್ತು ಭಾರತದ ಆತ್ಮವನ್ನೇ ಕೊಳ್ಳೆ ಹೊಡೆದದ್ದು ಪಶ್ಚಿಮ ಎಂದು ಬರೆದಿದ್ದೇನೆ. ಈ ಮನುಷ್ಯನ ಪ್ರಕಾರ ಆ ರೀತಿ ಕೊಳ್ಳೆ ಹೊಡೆದರೂ ಪರವಾಗಿಲ್ಲವಂತೆ, ಏಕೆಂದರೆ ಅನಂತರದ ಪೀಳಿಗೆಗಳಿಗೆ ವಿಜ್ಞಾನ, ಡೆಮಾಕ್ರಸಿ ಮುಂತಾದ ಸೌಲಭ್ಯಗಳು ಇಂಗ್ಲೀಷರಿಂದಲೇ ಅಂತೆ ಸಿಕ್ಕಿದ್ದು. ಈ ವಾದದಲ್ಲಿ ಹುರುಳೇ ಇಲ್ಲ ಎಂದು ತಿಳಿಯುವುದು ಕಷ್ಟವಲ್ಲ.

ನಾನು ಬಹಳ ಜನರ ಜೊತೆ ವಾದಿಸುತ್ತೇನೆ, ಭಾರತೀಯ ವಿಜ್ಞಾನದ ಬಗ್ಗೆ. ಬಹಳ ಜನರ ಪ್ರಕಾರ ಭಾರತದಲ್ಲಿ ವಿಜ್ಞಾನದಲ್ಲಿ ಸಾಧನೆಯಾಗಿದ್ದು ಪಾಶ್ಚಾತ್ಯರ ಸಂಪರ್ಕವಾದ ನಂತರವೇ ಎಂದು. ಈ ವಿಚಾರ ಸ್ವಲ್ಪವೂ ಸರಿಯಿಲ್ಲ. ಭಾರತ ಕೇವಲ "ಶೂನ್ಯ"ವನ್ನು ಕಂಡುಹಿಡಿಯಲಿಲ್ಲ. Linear indeterminate equations ಎನ್ನುವ ಒಂದು ಜಾತಿಯ ಸಮೀಕರಣಗಳನ್ನು ಬಿಡಿಸುವ ಪದ್ಧತಿ ಮೊದಲ ಬಾರಿಗೆ ಭಾರತದಲ್ಲಿ ೧೨ ನೇ ಶತಮಾನದಲ್ಲಿ ಕಂಡು ಹಿಡಿಯಲಾಯಿತು. "ಕುಟ್ಟಕ" ಎಂದು ಈ ಪದ್ಧತಿಯ ಹೆಸರು. ಆದರೆ ಈಗ ವಿಜ್ಞಾನ ಪ್ರಪಂಚದಲ್ಲಿ ಇದನ್ನು ಏನೆಂದು ಕರೆಯುತ್ತಾರೆ ಗೊತ್ತೆ? "Diophantine Equations" ಎಂದು! ಹಾಗೆಯೇ Quadratic indeterminate equations ಎನ್ನುವ ಸಮೀಕರಣಗಳನ್ನು "ವರ್ಗಪ್ರಕೃತಿ" ಎಂಬ ಪದ್ಧತಿಯನ್ನು ಉಪಯೋಗಿಸಿ ಬಿಡಿಸುವುದೂ ಭಾರತದಲ್ಲಿ ಹುಟ್ಟು ಪಡೆಯಿತು. ಈ ಸಮೀಕರಣಗಳನ್ನು "Fermat Equations" ಎಂದು ಕರೆಯುತ್ತಾರೆ! ಹೋಗಲಿ ಎಂದರೆ Fermat ಈ ಸಮೀಕರಣಗಳನ್ನು ಬಿಡಿಸಲೂ ಇಲ್ಲ, ಕೇವಲ propose ಮಾಡಿದ ಅಷ್ಟೆ! ಬೌಧಾಯನ ಸೂತ್ರ ಅಥವಾ Pythagoras theorem ಅಂತೂ ಸರ್ವವಿದಿತ. ಇನ್ನು ವರಾಹಮಿಹಿರ (೯ ನೇ ಶತಮಾನ) ಗ್ರಹಣಗಳ ಸಮಯಗಳನ್ನು ನಿಖರವಾಗಿ ಕಂಡುಹಿಡಿಯುವುದರಲ್ಲಿ ಸುಮಾರು ಮೊದಲಿಗ. ಇದನ್ನು ಯಾರಾದರೂ ನೆನೆಯುತ್ತಾರೆಯೇ? ಇಲ್ಲ! ಪ್ರಪಂಚದ ವಯಸ್ಸನ್ನು ೮.೪ ಬಿಲಿಯನ್ ವರ್ಷಗಳು ಎಂದು ಪ್ರಪ್ರಥಮವಾಗಿ ಪ್ರತಿಪಾದಿಸಿದ್ದು ನಮ್ಮಲ್ಲಿ. Trigonometry ಯಲ್ಲಿ ಕೂಡ ನಮ್ಮ ಗಣಿತಜ್ಞರು ಸಾಧನೆಯನ್ನು ಮಾಡಿದ್ದರು. ಇವೆಲ್ಲವನ್ನೂ ತಿಳಿಯದಿದ್ದರೆ ಈ ಲೇಖಕನಂತೆ ignorant ಆಗಿರುತ್ತೇವೆ ಅಷ್ಟೆ.

ಇದೆಲ್ಲ ಸರಿ, ಆದರೆ ತಂತ್ರಜ್ಞಾನದಲ್ಲಿ ಭಾರತ ಬಹಳ ಹಿಂದುಳಿದಿತ್ತು, ಅದನ್ನು ಬ್ರಿಟಿಷರು ಉದ್ಧರಿಸಿದರು ಎಂದು ಬಹಳ ಜನರ ವಾದ. ಇದರಲ್ಲೂ ಹುರುಳಿಲ್ಲ. ೧೭ ನೇ ಶತಮಾನಕ್ಕೆ ಮುಂಚೆ ಬ್ರಿಟನ್ ತಂತ್ರಜ್ಞಾನದಲ್ಲಿ ಮುಂದುವರೆದಿತ್ತೆ? ಖಂಡಿತ ಇಲ್ಲ. ಬ್ರಿಟನ್ನಿನ Industrial Revolution ಗೆ ಹಣ ಮತ್ತು ಮೂಲ ಸಾಮಗ್ರಿಗಳು ಬಂದಿದ್ದು ಭಾರತ, ಮುಂತಾದ ದೇಶಗಳಿಂದಲೇ. ಈ ಮೂಲ ಸಾಮಗ್ರಿಗಳನ್ನು ಪಡೆಯಲು ಬ್ರಿಟನ್ ಅತಿನೀಚ ಕೃತ್ಯಗಳನ್ನು ಎಸಗಿತು. ಕೇವಲ cash crops ಅನ್ನು ಬೆಳೆಯುವಂತೆ ಆದೇಶಿಸಿ ಜನರಿಗೆ ಊಟವಿಲ್ಲದಂತೆ ಮಾಡಿತು. ಇನ್ನು ಹಣದ ಮಾತು: ರಾಬರ್ಟ್ ಕ್ಲೈವ್ ನ ಕೊಳ್ಳೆ ಇತ್ತೀಚೆಗೆ ಮಿಲಿಯಗಟ್ಟಲೆ ಪೌಂಡುಗಳಿಗೆ ಮಾರಾಟವಾಯಿತು. ಈ ದುರಾಚಾರಗಳನ್ನೆಲ್ಲ ಮರೆತು DD ಯಂಥವರು ಅದು ಹೇಗೆ "ಪಾಶ್ಚಾತ್ಯರೇ ಪ್ರಪಂಚವೆಲ್ಲದರ ಒಳಿತಿಗೆ ಕಾರಣ" ಎಂದು ಹೇಳುತ್ತಾರೋ ದೇವರೇ ಬಲ್ಲ.

ಇದು ಕೇವಲ ಭಾರತದ ಕಥೆಯಲ್ಲ. "White man's burden" ಎಂಬ ನೆಪದಲ್ಲಿ ಎಲ್ಲ ದೇಶಗಳಲ್ಲಿಯೂ ಬ್ರಿಟನ್ ತನ್ನ ಸ್ವಾಮ್ಯವನ್ನು ಸ್ಥಾಪಿಸಿ ಸಂಪತ್ತನ್ನು ಕೊಳ್ಳೆ ಹೊಡೆದು, ಕ್ರೈಸ್ತ ಮತವನ್ನು ಬಲವಂತವಾಗಿ ಹೇರಿತು. ಈ ದೇಶಗಳಿಗೆ ಬ್ರಿಟನ್ನಿನಿಂದ ಸಹಾಯವಾಗಿದೆ ಎಂಬುದು ಸತ್ಯ. ಆದರೆ ಈ ಸಹಾಯದ ನೂರರಷ್ಟು ಈ ದೇಶಗಳಿಂದ ಬ್ರಿಟನ್ನಿಗೆ ಆಗಿದೆ ಎಂಬುದೂ ಅಷ್ಟೇ ಸತ್ಯ. ಬ್ರಿಟನ್ ಈಗ developed ದೇಶವಾಗಿರುವುದು ಭಾರತ ಮುಂತಾದ ದೇಶಗಳಿಂದ.

ಈಗ ನನ್ನ ಮುಂದೆ ಇರುವ ಪ್ರಶ್ನೆ - ಅಕಸ್ಮಾತ್ ಬ್ರಿಟನ್ ನಮ್ಮ ದೇಶವನ್ನು ಆಳದಿದ್ದರೆ ನಾವು ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದ್ದೆವೇ? ನನ್ನ ಪ್ರಕಾರ ಹೌದು, ಖಂಡಿತ. ಆದರೆ ನಮಗೆ ಅವಕಾಶವೇ ಸಿಗಲಿಲ್ಲವೇ!

5 comments:

Karthik said...

ನಮಸ್ಕಾರ, ಮೊದಲಿಗೆ ನಿಮ್ಮ blog ನನಗೆ ನೋಡಿ ಸಿಕ್ಕಾಪಟ್ಟೆ ಖುಷಿ ಆಗ್ತ ಇದೆ. ಕನ್ನಡದಲ್ಲಿ ಯರಾದ್ರೂ blog ಮಾಡಿದಾರ ಅಂತ ಹುಡುಕ್ತಾ ಇದ್ದೆ. ನೀವ್ ಸಿಕ್ಕಿದ್ರಿ..

ನಿಮ್ಮ ವಿಚಾರ ನಾನು ಒಪ್ಪುತ್ತೇನೆ. ಆದರೆ ನಾವು ಯೋಚ್ನೆ ಮಾಡ್ಬೇಕಾಗಿರೋದು ನಾವು ಅಷ್ಟೆಲ್ಲ ಬುದ್ದಿವಂತರೂ, ತಂತ್ರಜ್ಞಾನ ಆರ್ಯಭಟನ ಕಾಲದಲ್ಲೇ ಮುಂದುವರೆದಿದ್ರೂ, ಚಾಣಕ್ಯನ ಕಾಲದಲ್ಲೇ ರಾಜತಾಂತ್ರಿಕತೆ ಅಷ್ಟೆಲ್ಲ ಮುಂದುವರೆದಿದ್ದರೂ ನಮ್ಮನ್ನು ಮುಸಲ್ಮಾನರು, ಫ್ರೆಂಚರು, ಪೋರ್ಚುಗೀಸರು, ಆಂಗ್ಲರು ಇವರೆಲ್ಲಾ ಬನ್ದು ಆಳಲು ಕಾರಣವೇನು ? ನಮ್ಮಲ್ಲಿ ಒಗ್ಗಟ್ಟಿರಲಿಲ್ಲ. ಈಗಲೂ ಇಲ್ಲ.

ಒಬ್ಬ ಭಾರತೀಯನನ್ನ ನಿಲ್ಲಿಸಿ ನೀನು ಯಾರು ಅಂದ್ರೆ ಅವನು, ನಾನೊಬ್ಬ ಗೌಡ, ನಾನೊಬ್ಬ ಬ್ರಾಹ್ಮಣ, ವೈಶ್ಯ ಅಂತಲೇ ಹೇಳುತ್ತಾನೆಯೆ ಹೊರತು ನಾನೊಬ್ಬ ಹಿಂದು, ನಾನೊಬ್ಬ ಭಾರತೀಯ ಅಂತ ಹೇಳೋದಿಲ್ಲ. ಅದನ್ನ ಯುವಕರಾದ ನಾವು ಸರಿ ಮಾಡಬೇಕಾಗಿದೆ.

ನಿಮ್ಮ blog ಓದಿ ಬಹಳ ಬಹಳ ಸಂತೋಷ ಆಯ್ತು.. ನನ್ನ ಬ್ಲಾಗ್ ಬಗ್ಗೆ ಸಹ comments ಬರೀರಿ..

apne aap ko dekho said...

how did you get a non roman based font working.
I NEED devnagri fonts to work please let me know how
you got them to work,
if possible blog/tutorial about it

thanks
dhanyavad
shukriya
meherbani

Karthik said...

hi we use Unicode to type. Use some s.w to produce unicode for Devanagari. For more info goto baraha.com

apne aap ko dekho said...

This is a really stupid question, but how do you load an article written in another app to blogspot thanks

Karthik said...

I think gridhrasaras would come with a gun pointed towards us .. we are using her Blog for our conv. hehe.. hope she doesnt mind..

Coming back ur question: If you have XP you directly can copy and paste Unicode characters onto blog. I am not very sure with other OS. Unix, Linux ofcourse supports Unicode characters. I think WIN2000 also does supports..

U would need to find out a way to produce Unicod echaratcers.. We use baraha for Kannada and Devanaagari characters.

:)