Tuesday, June 05, 2007

ಋಜುವಾದ ಮಾತು

ಈಚೆಗೆ ಸುದ್ದಿ ಮಾಡುತ್ತಿರುವ ವಿಷಯ 'ಆವರಣ'ದ ಮತ್ತು ಭೈರಪ್ಪನವರ ಬಗ್ಗೆ ಯು. ಆರ್. ಅನಂತಮೂರ್ತಿಯವರು ಮಾಡಿದ ಟೀಕೆ. ಯು.ಆರ್‍.ಏ ಅವರು ಮೊದಲು ಮಾಡಿದ ಟೀಕೆಗೆ ಸ್ಪಂದಿಸಿದ ಅನೇಕಜನ ವಿವಿಧಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಜಯಕರ್ಣಾಟಕವನ್ನೂ, ಕೆಲವು ಸುಹೃದರ ಬ್ಲಾಗ್ ಗಳನ್ನೂ ಓದುವ ನನಗೆ ಭೈರಪ್ಪನವರ ಪರವಾಗಿಯೇ ಇಲ್ಲಿನ ಸ್ಪಂದನಗಳು ಇದ್ದದ್ದು ಅಚ್ಚರಿ ತರಿಸಲಿಲ್ಲ. ನನ್ನ ನಿಲುವೂ ಕೂಡ ಸುಮಾರು ಹಾಗೇ ಇದೆ.

ಅನಂತಮೂರ್ತಿಯವರ ಭಾಷೆಯ ಬಗ್ಗೆ ನನಗೆ ಮೊದಲಿನಿಂದಲೂ ಮೆಚ್ಚುಗೆ-ಗೌರವಗಳಿವೆ. ಬಹಳ ಚೆನ್ನಾಗಿ ಬರೆಯುತ್ತಾರೆ. ಆದರೆ ಒಳಹೊಕ್ಕು ನೋಡಿದರೆ ಅವರದು ಸತ್ತ್ವವೇ ಇಲ್ಲದ ಬರವಣಿಗೆ. ಇದಕ್ಕೆ ಕಾರಣ ಅವರ ಪೂರ್ವಗ್ರಹಗಳು. ಅವರ ಪುಸ್ತಕಗಳಲ್ಲಿ ನೈಜತೆ ಕಾಣಸಿಗದು. ಒಂದು ಕಥೆಯನ್ನು ಹೇಳುವಾಗ, ಅದು ಪಾತ್ರಗಳ ಕಥೆಯಾಗಿರಬೇಕು. ಪಾತ್ರಗಳು ಲೇಖಕನ ಸೃಷ್ಟಿಯಾಗಿದ್ದರೂ ಅವರ ಕ್ರಿಯೆ-ಭಾವ-ಅಭಿಪ್ರಾಯಗಳು ಲೇಖಕನವಲ್ಲದೆ ಅವುಗಳದೇ ಆದರೆ ಅಂಥ ಕಥೆ ನೈಜ ಎನಿಸುತ್ತದೆ. ಅನಂತಮೂರ್ತಿಯವರ ಬರೆಹಗಳಲ್ಲಿ ಈ ಗುಣ ನನಗೆ ಕಾಣಲಿಲ್ಲ. ತಮಾಷೆಯೆಂದರೆ ಅನಂತಮೂರ್ತಿಯವರು ಭೈರಪ್ಪನವರನ್ನು ಈ ವಿಷಯವಾಗಿ ಟೀಕಿಸಿರುವುದು!

ಭೈರಪ್ಪನವರ ಪುಸ್ತಕಗಳಲ್ಲಿ ಕವಿತ್ವದ ಆರ್ದ್ರತೆ ಇಲ್ಲ ಎಂದು ಅನಂತಮೂರ್ತಿಯವರು ಹೇಳುವುದನ್ನು ಒಪ್ಪುತ್ತೇನೆ. ಅವರ ಭಾಷೆ ಸ್ವಲ್ಪ ಗ್ರಾಮ್ಯ. ಆದರೆ ಭೈರಪ್ಪನವರ ಬರೆಹಗಳು (ಅನಂತಮೂರ್ತಿಯವರೂ ಒಪ್ಪುವಂತೆ) ಅದು ಹೇಗೆ ಅಷ್ಟು ಜನಪ್ರಿಯವಾದವು? ಒಂದಂತೂ ನಿಜ. ಸತ್ತ್ವಹೀನಕೃತಿಗಳು ಒಮ್ಮೊಮ್ಮೆ ಪ್ರಸಿದ್ಧವಾಗಬಹುದಾದರೂ ಸರ್ವಕಾಲದಲ್ಲಿಯೂ ಒಂದು ಕೃತಿ ಪ್ರಸಿದ್ಧವಾಗಬೇಕಾದರೆ ಅದರಲ್ಲಿ ಅಂತಃಸತ್ತ್ವ, ವಿಚಾರಶೀಲತೆ ಮತ್ತು ಪ್ರಾಮಾಣಿಕತೆಗಳು ಇರಬೇಕು. ಭೈರಪ್ಪನವರ ಕೃತಿಗಳಲ್ಲಿ ಈ ಗುಣಗಳಿರುವುದರಿಂದ ಅವರ ಕೃತಿಗಳು ಅಷ್ಟು ಜನಪ್ರೀತಿಯನ್ನು ಗಳಿಸಿವೆ. ಕೆಲವರು ಆರೋಪಿಸಿರುವಂತೆ ಭೈರಪ್ಪನವರು ಬ್ರಾಹ್ಮಣಶ್ರೇಷ್ಠತೆಯನ್ನು ಪ್ರತಿಪಾದಿಸುವುದಿಲ್ಲ. ಹಾಗೆ ನೋಡಲು ಹೋದರೆ ಅವರು ಯಾವ ವಿಷಯವನ್ನೂ ಪ್ರತಿಪಾದಿಸುವುದಿಲ್ಲ. ಪ್ರಶ್ನೆಗಳನ್ನು ಮಾತ್ರ ನಮ್ಮ ಮುಂದಿಟ್ಟು ಉತ್ತರದ ಬಗ್ಗೆ ನಾವೇ ಯೋಚನೆ ಮಾಡುವಂತೆ ಮಾಡುತ್ತಾರೆ. ಇದು ಉತ್ತಮಲೇಖಕನ ಗುರುತು. ಉದಾಹರಣೆಗೆ, 'ದಾಟು' ವಿನಲ್ಲಿ ಅಂತರ್ಜಾತೀಯ ವಿವಾಹಗಳ ಬೇರೆಬೇರೆ ವಿಧಗಳನ್ನು, ಬೇರೆಬೇರೆ ಜಾತಿಯವರಿಗೆ ತಮ್ಮ ಜಾತಿಯ ಮತ್ತು ಅನ್ಯಜಾತಿಗಳ ಬಗ್ಗೆ ಇರುವ ಭಾವನೆಗಳನ್ನು ಕಥೆಯ ಹಂದರದಲ್ಲಿ ಹೆಣೆದು, ಈ ವಿಷಯಗಳಲ್ಲಿ ನಮ್ಮ ಪ್ರಶ್ನೆಗಳನ್ನು ಪ್ರಚೋದಿಸುತ್ತಾರೆ. ಉತ್ತರಗಳನ್ನು ಕಂಡುಹಿಡಿಯುವುದು ಅವರವರಿಗೆ ಬಿಟ್ಟಿದ್ದು!

ಹಾಗೆ ನೋಡಿದರೆ ಭೈರಪ್ಪನವರ ನಿಲುವು ಹೀಗೆಯೇ ಎಂದು ನಿಖರವಾಗಿ ಹೇಳಬಲ್ಲ ಪುಸ್ತಕ 'ಆವರಣ'. ಸಾಹಿತ್ಯದೃಷ್ಟ್ಯಾ ಇದು ಭೈರಪ್ಪನವರ ಉತ್ತಮಕೃತಿಯೆಂದು ಖಂಡಿತ ಹೇಳಲಾಗದು. ಆದರೆ ಇಲ್ಲಿ ವಿವರಿಸಿರುವ ವಿಚಾರಗಳು ನಮ್ಮ ಇಂದಿನ "ಸೆಕ್ಯುಲರ್" ಜನತೆಗೆ ಅಗತ್ಯವಾಗಿ ತಿಳಿಹೇಳಬೇಕಾದವು. ಸತ್ಯದ ಸಮಾಧಿಯ ಮೇಲೆ ಸುಳ್ಳಿನ ಗೋಪುರವನ್ನು ಕಟ್ಟಲು ಹೊರಟಿರುವವರು ನಮ್ಮ ಇಂದಿನ ವಾಮಪಂಥೀಯರು. ಆಗಿರುವ ದುರಂತಗಳನ್ನು, ಹತ್ಯಾಕಾಂಡಗಳನ್ನು "ಆಗಲಿಲ್ಲ" ಎಂದೂ, ಆಗದ ಆಕ್ರಮಣಗಳನ್ನು "ಆಗಿದೆ" ಎಂದೂ ಸಾರುತ್ತಿರುವ, ಅದನ್ನೇ ನಂಬಿರುವ ವ್ಯಕ್ತಿಗಳು. ಒಂದು ಕೋಮಿನವರ ಮನಸ್ಸಂತೋಷಕ್ಕಾಗಿ ಮತ್ತೊಂದು ಕೋಮಿನವರನ್ನು ತುಳಿಯುವ ಮನಸ್ಸುಳ್ಳವರು. ಹಿಂದೂ-ಮುಸ್ಲಿಮರ ಸ್ನೇಹ ಭಾರತೀಯರಾದ ಎಲ್ಲರಿಗೂ ಬೇಕಾದುದು. ಈ ಸ್ನೇಹ ಸತ್ಯದ ಬುನಾದಿಯ ಮೇಲೆ ನಿಲ್ಲಬೇಕೆಂಬುದು ಭೈರಪ್ಪನವರ ಮತ. ಹೌದು, ಇಸ್ಲಾಂ ಭಾರತದಲ್ಲಿರುವಷ್ಟು ಬೇರೆಲ್ಲೂ ವರ್ಣರಂಜಿತವಾಗಿಲ್ಲ. ಆದರೆ ಇನ್ನೂ ಮುಸ್ಲಿಮರಲ್ಲಿ ಬಹುಪತ್ನೀತ್ವ, ಮೂರು ಬಾರಿ ಹೇಳುವ ತಲಾಕ್ ಜಾರಿಯಲ್ಲಿದೆ. Uniform Civil Code ನ ಕನಸು ಕನಸಾಗಿಯೇ ಉಳಿದಿದೆ. ನಮ್ಮ ವಾಮಪಂಥೀಯರಿಗೋ ಇದು ಹೀಗೆಯೇ ಉಳಿಯಲಿ ಎಂದು. ಕಾಲಕ್ಕನುಗುಣವಾಗಿ ಮುಸ್ಲಿಮರೂ ಬದಲಾಗುವುದು ಬೇಡವೇ? ಹೌದು, ಕಬೀರ್, ಶಿರ್ಡಿಯ ಸಾಯಿಬಾಬಾ ಮುಂತಾದ ಕಾರಣಜನ್ಮರ ಜನ್ಮ ಮತ್ತು ವೃದ್ಧಿ ಇಂತಹುದೇ ಪರಿಸ್ಥಿತಿಯಲ್ಲಿ ಆಯಿತು. ಆದರೆ ಇದನ್ನೇ ಮುಂದಿಟ್ಟುಕೊಂಡು "ಮೊಗಲರ ಆಳ್ವಿಕೆಯಲ್ಲಿ ಹಿಂದೂಗಳು ಎಂದಿಗಿಂತ ಸಂತೋಷವಾಗಿದ್ದರು" ಎಂದು ಹೇಳಿದರೆ ಅದನ್ನು ಒಪ್ಪಲಾಗುತ್ತದೆಯೇ? ಔರಂಗಜೇಬ ಜೆಸಿಯಾ ವಿಧಿಸಿದ್ದು ಸುಳ್ಳಾಗುತ್ತದೆಯೇ?

ಮೂರ್ತಿಯವರು ತಮ್ಮೂರಿನ ದೇವಸ್ಥಾನಗಳನ್ನೆಲ್ಲವನ್ನೂ ಜೀರ್ಣೋದ್ಧಾರ ಮಾಡಿಸಿದ್ದು ಮಿರ್ಜಾ ಇಸ್ಮಾಯಿಲ್ ಸಾಹೇಬರು ಎಂದು ಮಾತಿನ ಮಧ್ಯೆ ಹೇಳಿದ್ದಾರೆ. ನಾನು ಇನ್ನೂ ಬಹಳಷ್ಟು ಉದಾಹರಣೆಗಳನ್ನು ಕೊಡಬಲ್ಲೆ. ಬಿ ಆರ್ ಚೋಪ್ರಾ ರವರ "ಮಹಾಭಾರತ್" ಧಾರಾವಾಹಿಯ ಸ್ಕ್ರಿಪ್ಟ್ ಬರೆದದ್ದು ರಾಹಿ ಮಾಸೂಮ್ ರಾಜಾ. ಹಿಂದಿಯ "ಬೈಜು ಬಾವ್ರಾ" ಚಿತ್ರದ 'ಮನ್ ತರ್‌ಪತ್ ಹರಿ ದರ್‌ಶನ್ ಕೋ ಆಜ್' ಗೀತೆಯನ್ನು ಬರೆದಿದ್ದು ಶಕೀಲ್ ಬದಾಯುನಿ, ಸಂಗೀತ ನಿರ್ದೇಶಕ ನೌಷಾದ್ ಮತ್ತು ಹಾಡಿದ್ದು ಮೊಹಮ್ಮದ್ ರಫಿ. ಆದರೆ ಇವರೆಲ್ಲರನ್ನೂ ಔರಂಗಜೇಬನನ್ನೂ ಹೋಲಿಸುವುದು ridiculous. ಭಾರತೀಯಮುಸಲ್ಮಾನರನೇಕರನ್ನು ನಾವು ನಮ್ಮವರೆಂದು ಕಂಡುಕೊಂಡಿರುವಂತೆಯೇ, ಹಾಗಿಲ್ಲದವರ ವರ್ತನೆಯನ್ನು (ವ್ಯಕ್ತಿಗಳನ್ನಲ್ಲ) ಖಂಡಿಸಬೇಕು. ಈ ದುಷ್ಕೃತ್ಯಗಳು ಹಿಂದೆ ಆಗಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಆಗಲೇ ಸುಭದ್ರಸಮಾಜದ ನಿರ್ಮಾಣ ಸಾಧ್ಯ. ಹೀಗೆ ಆಗಬಾರದು ಎಂದು ಹೇಳುವವರಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವೆಂದೇ ಹೇಳಬೇಕಾಗುತ್ತದೆ.

ಅನಂತಮೂರ್ತಿಯವರು ಮ್ಯಾಕ್‌ಬೆತ್ ಅನ್ನು ಷೇಕ್ಸ್‌ಪಿಯರ್ ನೋಡಿರುವ ರೀತಿಯನ್ನು ಉದಾಹರಿಸಿದ್ದಾರೆ. (ತನ್ಮೂಲಕ ಔರಂಗಜೇಬನನ್ನೂ ಮನುಷ್ಯನನ್ನಾಗಿ ನೋಡುವ ತಮ್ಮನ್ನು ಆ ಮಹಾಕವಿಯ ಜೊತೆ ಹೋಲಿಸಿಕೊಂಡಿದ್ದಾರೆ!) ಷೇಕ್ಸ್‌ಪಿಯರ್ ಮ್ಯಾಕ್‌ಬೆತ್ ನನ್ನು ಮನುಷ್ಯನನ್ನಾಗಿ ನೋಡಿದರೂ ಅವನು ಮಾಡಿದ ಕೊಲೆಯನ್ನು ಮರೆಮಾಚಲಿಲ್ಲ. ಆದರೆ ಆವರಣದ ಬಹುತೇಕ ಟೀಕಾಕಾರರು ಔರಂಗಜೇಬ ದೇವಸ್ಥಾನಗಳನ್ನು ನಾಶ ಪಡಿಸಲಿಲ್ಲವೆಂಬುದನ್ನೇ ಒರಲುತ್ತಾರೆ. ಅಥವಾ ನಾಶಪಡಿಸಿದುದನ್ನು ಈಗೇಕೆ ಹೇಳಬೇಕು ಎಂದು ಹೇಳುತ್ತಾರೆ. ತದ್ವಿರುದ್ಧವಾಗಿರುವ ಜರ್ಮನರ ವರ್ತನೆಯನ್ನು ನೋಡಿ. ನಾಜಿಗಳು ಯಹೂದ್ಯರ ಮೇಲೆ ನಡೆಸಿದ ಹತ್ಯಾಕಾಂಡವನ್ನು ಜರ್ಮನರುಎಂದೂ ಮರೆಮಾಚಲಿಲ್ಲ. ಹಾಗಾಗಿ ಅವರವರಲ್ಲಿ ಇಂದು ಶಾಂತಿಯಿದೆ. ಆದರೆ ಭಾರತದಲ್ಲಿ ಹಾಗೆ ಆಗಲಿಲ್ಲವಾದ್ದರಿಂದ ಹಿಂದೂ-ಮುಸ್ಲಿಮರ ನಡುವೆ ಇರಬೇಕಾದಷ್ಟು ಸೌಹಾರ್ದ ಇಲ್ಲವಾಗಿದೆ. ಇದಕ್ಕೆ ಕಾರಣ ಯಾರು?

ಗುಪ್ತರಾಗಲಿ ರಾಷ್ಟ್ರಕೂಟರಾಗಲಿ ರಜಪೂತರಾಗಲಿ ಮೊಗಲರಾಗಲಿ ಮರಾಠರಾಗಲಿ, ಎಲ್ಲರೂ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸಿದವರು. ಅವರೆಲ್ಲರಲ್ಲಿ ಗುಣಗಳಿದ್ದಂತೆ ಅವಗುಣಗಳೂ ಇದ್ದವು. ನಾವು ಗುಣಗಳನ್ನು ಒಪ್ಪಿಕೊಂಡಂತೆಯೇ ಅವಗುಣಗಳನ್ನೂ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಚರಿತ್ರೆಯ ಮೂಲ ಉದ್ದೇಶಕ್ಕೇ ಕೊಡಲಿಯೇಟು ಬೀಳುತ್ತದೆ. ಹೊಸ ಚಿಗುರು ಹಳೆಯ ಬೇರಿನಿಂದಲೇ ಬರುವುದು. ಬೇರು ಸುಳ್ಳಿನದಾದರೆ ಗಿಡವೂ ಸುಳ್ಳೇ ಅಲ್ಲವೆ?

8 comments:

December Stud said...

Ahhh....what a beautiful writing!!! I am not sure I want to comment on the URA controversy here. I probably should go on a tangent. Just send this as an email to URA. My God, you have captured the essence of the whole episode brilliantly. I sincerely have no words to say. Every word in your writing is true. The second paragraph is just brilliant!!! Oh, I so want to write in kannada now. You inspired me :)

Anonymous said...

Wonderful post. You really have put what most of us are thinking in precise words!

parijata said...

DS,
Thanks. You made my day!
Actually I started to write this as a comment to your and Nilagriva's posts. It became so big that I had to make it another post.
Anon,
Thanks for the comment. I usually prefer to stay away from controversy, but this time I just could not.

hAram said...

Paree..

You certainly think well and write even better.

You also seem to revel in wordplay - Rujuvaada Maatu, Shleshaartha, green for environment, green for envy and greenbacks for money....

As I was just commenting to nIlagrIva, even bad things and people too have their uses.

Just imagine if URA had not so vehemently condemned SLB and his Aavarana, would so many of us have turned so vociferous?

We should thank URA. But for him, we would not have produced so many responses. But for this controversy I would not have started my blahgging adventure and discovered so many of you vanasumas.

Even the good, the bad, and the ugly have their places in the divine scheme of things.

May URA's tribe increase !

May all of them continue to supply us with enough fodder for our thoughts and expressions.

Amen.

<>

Allahma said...

When a hindu writes about islamists' atrocities, pseudosecularists of Karkataka cry foul.

I recommend that they read Pakistani journalist Zahid Hussain's book, Frontline Pakistan, page 15 onwards for an account of a modern day Aurangzeb in Pakistan itself, Gen. Zia Ul-Huq.

parijata said...

haram,
Welcome to my blog.
allahma,
That is the sad state of affairs in India. Secularism has become equivalent to majority-bashing.

Deepak said...

Well written.U have considered all the angles to write this article.Keep it up.

Anonymous said...

Bhyrappa, the author of 'Aavarana' intends to spread poison and communal hatred, which God forbid, will result in yet another genocide of Muslims similar to what happened in Gujarat in 2002.

If Bhyrappa is to write about something, he should talk about the oppression and suffering of the lower caste hindus by brahmins, like Bhyrappa, for centuries.

It is preposterous for a person who worships idols with elephant heads and private body parts of 'gods', to be speaking about the 'shallowness' of another religion.

If not for sane people like Ananthamurthy, the Bhyrappas and Arun Shouries would have poisoned the entire population.