Wednesday, October 10, 2007

ಸರ್ವೇಷಾಂ ರೋದನಂ ಬಲಂ!

ಕರ್ಣಾಟಕದಲ್ಲಿ ನಡೆಯುತ್ತಿರುವ ರಾಜಕೀಯ-ನಾಟಕ ಎಲ್ಲರಿಗೂ ಗೊತ್ತಿರುವಂಥದ್ದು. ಅಧಿಕಾರ ತಮ್ಮೊಬ್ಬರದ್ದೇ ಸ್ವತ್ತು ಎಂದು ಅಂದುಕೊಂಡವರಿಂದ ಇನ್ನೇನು ತಾನೇ ನಿರೀಕ್ಷಿಸಬಹುದು?

ಇಷ್ಟೆಲ್ಲದರಲ್ಲಿ, ನನ್ನ ಗಮನ ಸೆಳೆದಿದ್ದು ದೇವೇಗೌಡರ ಹೆಂಡತಿಯ ಅಳಲು. ದಟ್ಸ್ ಕನ್ನಡದ ಒಂದು ವರದಿಯ ಪ್ರಕಾರ, ಎ ದೇವೇಗೌಡರ ಪತ್ನಿ ಚೆನ್ನಮ್ಮನವರು ಜೆಡಿಎಸ್ ನ ಶಾಸಕರಲ್ಲಿ "ಬಿಜೆಪಿ ಸೇರಬೇಡಿ. ನೀವು ಬಿಜೆಪಿ ಸೇರಿದರೆ ನನ್ನ ಪತಿ ಉಳಿಯುವುದಿಲ್ಲ. ನನ್ನ ಮಾಂಗಲ್ಯ ಉಳಿಸುವ ಶಕ್ತಿ ನಿಮ್ಮಲ್ಲಿದೆ" ಎಂದು ಅಂಗಲಾಚಿದರಂತೆ. ಇನ್ನೊಂದೆಡೆ ಕುಮಾರಸ್ವಾಮಿಯವರ ಪತ್ನಿ "ನಮ್ಮ ಮಾವನವರ ಮಾತು ಕೇಳಿ ನನ್ನ ಗಂಡ ಹಾಳಾಗಿಹೋದರು" ಎಂದು ಬಿಕ್ಕುತ್ತಿದ್ದಾರಂತೆ. ಇದೇ ವಿಷಯವಾಗಿ ಇದ್ದ ಇನ್ನೊಂದು ಸುದ್ದಿ ಏನೆಂದರೆ ಗೌಡರು "ಅಧಿಕಾರ-ಹಸ್ತಾಂತರವಾದರೆ ನೇಣು ಹಾಕಿಕೊಂಡು ಸಾಯುತ್ತೇನೆ" ಎಂದಿದ್ದು, ಹಾಗೂ ರೇವಣ್ಣ "ತಂದೆಯ ಸಾವಿಗೆ ನೀನೇ ಕಾರಣನಾಗುತ್ತೀಯೆ" ಎಂದು ಕುಮಾರಸ್ವಾಮಿಯವರನ್ನು ಹೆದರಿಸಿದ್ದು.

ಬಹುಶಃ ಭಾರತದ ಸಿನಿಮಾಗಳಂತೆಯೇ ಭಾರತೀಯರಾಜಕೀಯದಲ್ಲಿಯೂ emotional blackmail ಕೆಲಸ ಮಾಡುತ್ತದೆಯೋ ಏನೋ!

4 comments:

Aram said...

Karo Naatak is what the D.Ghoda family is doing. Recall an earlier playacting 20 months ago when the son became the CM and performed a clever Naatak of suspending HDK group from JDS?

All this Naatak is because now the Machiavelli's eyes are on the PM's throne post the likely national polls. Read this week's The Week.

December Stud said...

ಇದು ರಾಜಕೀಯದೊಳಗಿನ ಸಿನಿಮಾ ಅಷ್ಟೆ

Harish - ಹರೀಶ said...
This comment has been removed by the author.
Harish - ಹರೀಶ said...

ಈಗೇನೋ ಹೊಸ ನಾಟಕ ಶುರುವಾಗಿದೆ. ಇನ್ನೇನಾಗುತ್ತೋ ೨೦-೨೦ ಮ್ಯಾಚ್?!