ಚಿತ್ರಕವನ ದ ಒಂಭತ್ತನೆಯ ಚಿತ್ರಕ್ಕಾಗಿ ಬರೆದ ಪದ್ಯ.
ಕಿಟಕಿಯ ಸರಳುಗಳಾಚೆಯ ಜಗವದು
ಎಷ್ಟು ಸುಂದರವು, ನೋಡಿದೆಯಾ?
ಚಿಗುರಿದ ಮರಗಳು, ಅರಳಿದ ಹೂಗಳು
ಕರೆದಿವೆ ನಮ್ಮನು, ಕೇಳಿದೆಯಾ?
ಮಾವಿನ ಮರದಲ್ಲಿರುವ ಜೇನನ್ನು
ಸವಿಯಲು ಸಹಚರನಾಗುವೆಯಾ?
ಹಲಸಿನ ಹಣ್ಣನು ಮೆಲ್ಲನೆ ಬಿಡಿಸುತ
ಮೆಲ್ಲಲು ನೀ ಜತೆಗೂಡುವೆಯಾ?
ನಿದ್ದೆಯ ಹೊತ್ತಲಿ ನೀರಲಾಡಿದ್ದು
ಅಮ್ಮಗೆ ನೀನೇ ಹೇಳಿದೆಯಾ?
ಪಕ್ಕದ ಹಳ್ಳಿಯ ಜನರ ಕೆಣಕಿದ್ದು
ಅವಳಿಗೆ ಕೋಪವ ತರಿಸಿದೆಯಾ?
ನಮ್ಮ ಚೇಷ್ಟೆಗಳು ಮೀರಿದವೇ ಮಿತಿ?
ಚಿಣ್ಣರ ಮೇಲೆಯೆ ಹಠ ಸರಿಯಾ?
ಕೂಡಿ ಹಾಕಿಹಳು ಅಮ್ಮನು ನಮ್ಮನು
ಏನ ಮಾಡುವುದು, ಯೋಚಿಸೆಯಾ?
10 comments:
Nice poem...check your email.
sundaravada kavana.
DS,
Thanks for the email.
RK,
Thanks.
Update: Modified the second stanza and added a new one.
Nice....
and good addition!!!
Ollaya padhya....
Its very tough to write even one stanza...looks like you are one of the rare persons who can write smoothly...
cheers
mohan!
"Padyam Vadhyam Gadyam Hridyam !"
Nandalike Lakshminaranappa would have probably refrained from saying this after reading this poem.
i liked the last stanza. it's beautiful! :)
U could hv sent this to CK as well. In this, ur view is more clear and composition is better.
Keep it up.
DS, Mohan, iznogoud, mouna, shree
Thanks for appreciating this amateur's poem.
With encouragement like this, I hope to write more and more!
Today's amateur
Tomorrow's professional
Post a Comment