Wednesday, August 29, 2007

ಕೆಟ್ಟ, ಕೆಡುತ್ತಿರುವ ಕನ್ನಡ

ಇತ್ತೀಚೆಗೆ ಮಿತ್ರರೊಬ್ಬರು ನನ್ನನ್ನು ಕೇಳಿದರು "ಏನ್ರಿ, 'ಸಾಫ್ಟ್‌ವೇರ್' ಗೆ ಕನ್ನಡದಲ್ಲಿ ಏನು ಹೇಳ್ತಾರೆ?" ಎಂದು. ನಾನು "ತಂತ್ರಾಂಶ" ಎಂದು ಉತ್ತರಿಸಿದೆ. ಅವರು ಎರಡು ಕ್ಷಣ ಯೋಚಿಸಿ "'ಅಭಿಯಂತ' ಎಂದರೆ ಇಂಜಿನಿಯರ್ ಅಲ್ಲವೇನ್ರಿ?" ಎಂದು ಕೇಳಿದರು. ಹೌದೆಂದೆ. ಆಗ ಅವರು "ಹಾಗಿದ್ದರೆ ನನ್ನ ವೃತ್ತಿಯನ್ನು 'ತಂತ್ರಾಂಶ-ಅಭಿಯಂತ' ಎಂದು ನಮೂದಿಸಬಹುದೆ?" ಎಂದು ಕೇಳಿದರು. ನಾನು ಅವಾಕ್ಕಾದೆ.

ಕನ್ನಡಭಾಷೆ ಬಹಳ ಸೊಗಸಾದ, ಮುದ್ದಾದ ಭಾಷೆ. ಆದರೆ ಇತ್ತೀಚೆಗೆ ಕೇಳಿಬರುತ್ತಿರುವ ಕನ್ನಡದಲ್ಲಿ ಸೊಗಸು ಕಾಣಿಸುತ್ತಿಲ್ಲ. ವಾರ್ತಾಪತ್ರಿಕೆಗಳಲ್ಲಾಗಲಿ, ದೂರದರ್ಶನದಲ್ಲಾಗಲಿ ಕಾಣ/ಕೇಳಿಬರುವ ಕನ್ನಡ ಬಹಳ ಸಲ ಸಹನಶೀಲೆಯಾದ ಕನ್ನಡ-ತಾಯಿಗೇ ಅಳು ಬರಿಸುವಂತಿರುತ್ತದೆ.

ಸಂಸ್ಕೃತ ಮತ್ತು ಕನ್ನಡಪದಗಳನ್ನು ಸೇರಿಸಿ ಮಾಡುವ ಸಮಾಸ ಅರಿಸಮಾಸ. ಕುಮಾರವ್ಯಾಸನ ಭಾರತದಲ್ಲಿ ಅಲ್ಲಲ್ಲಿ ಅರಿಸಮಾಸಗಳ ಪ್ರಯೋಗವಿದೆ ಎಂದು ಕೇಳಿದ್ದೇನೆ. ಪ್ರತಿದಿನ ಬೆಳಗಿನ ಪತ್ರಿಕೆಯನ್ನು ತೆಗೆದು ಎರಡು ನಿಮಿಷ ಓದಿದರೆ ಹೊಸ ಹೊಸ ಅರಿಸಮಾಸಗಳು ಕಣ್ಣಿಗೆ ರಾಚುತ್ತವೆ. ಕುಮಾರವ್ಯಾಸ ಅರಿಸಮಾಸಗಳನ್ನು ಮಾಡಿದ ಎಂಬುದನ್ನೇ ಪ್ರಮಾಣವಾಗಿಟ್ಟುಕೊಂಡು ಸಿಕ್ಕ ಸಿಕ್ಕ ಪದಗಳೆಲ್ಲಕ್ಕೂ ಸಮಾಸ ಮಾಡಲು ಹೊರಟರೆ ಸರಿಯೇ? 'ಸದ್ಬಳಕೆ', 'ಸಂಪರ್ಕ-ಕೊಂಡಿ' - ಒಂದೇ ಎರಡೇ? ಇವು ವ್ಯಾಕರಣರೀತ್ಯಾ ಅಶುದ್ಧವಷ್ಟೇ ಅಲ್ಲ, ಕೇಳಲು ಸಹ ಚೆನ್ನಾಗಿಲ್ಲ. ಕೇಳಲಾದರೂ ಚೆನ್ನಾಗಿದ್ದರೆ ಒಪ್ಪಿಕೊಳ್ಳಬಹುದೇನೋ...

ಸಮಾಸಗಳದೊಂದಾದರೆ ಮತ್ತೊಂದು ವಿಶೇಷಣಗಳದ್ದು. ಅನೇಕರ ಬರೆಹಗಳಲ್ಲಿ "ಬುದ್ಧಿಮಾಂದ್ಯ ಮಕ್ಕಳು" ಎಂಬ ಪದಪುಂಜ ಕಾಣುತ್ತದೆ. ಮಂದ ಬುದ್ಧಿ ಇರುವವರು ಬುದ್ಧಿಮಂದರು. ಬುದ್ಧಿಮಂದರ ಭಾವ ಬುದ್ಧಿಮಾಂದ್ಯ. ಹೀಗೆ ಬುದ್ಧಿಮಾಂದ್ಯ ಒಂದು ನಾಮಪದ. ಈ ಪದ "ಮಕ್ಕಳು" ಎಂಬ ಪದಕ್ಕೆ ವಿಶೇಷಣವಾಗಲು ಹೇಗೆ ಸಾಧ್ಯ? ಪ್ರೊ. ಜಿ. ವೆಂಕಟಸುಬ್ಬಯ್ಯನವರು 'ಅಂಗವಿಕಲ' ಎಂಬ ಪದಕ್ಕೆ ಬದಲಾಗಿ 'ವಿಕಲಚೇತನ' ಎಂಬ ಪದವನ್ನು ಸೂಚಿಸಿದ್ದಾರೆ. ಹಾಗೆ ಸೂಚಿಸಿದಾಗ ಅವರು ಪ್ರಾಯಃ ಅನ್ಯಮನಸ್ಕರಾಗಿದ್ದರೇನೋ. 'ಅಂಗವಿಕಲ'ರ ಅಂಗ(ಗಳು) ಮಾತ್ರ ವಿಕಲ. ಆದರೆ ವಿಕಲಚೇತನರ ಮನಸ್ಸು-ಬುದ್ಧಿ-ಆತ್ಮಗಳೇ ವಿಕಲ!(ಚೇತನ = soul , mind L. ; n.consciousness , understanding , sense , intelligence) ಆಂಗ್ಲದ 'differently abled' ಎಂಬ ಅರ್ಥ ತರಲು ಹೋಗಿ ಇದು ಎಂತಹ ಆಭಾಸವಾಯಿತು! ಕನ್ನಡದ ಎಲ್ಲ ಪತ್ರಿಕೆಗಳಲ್ಲಿಯೂ ಈ ಪದಗಳು ರಾರಾಜಿಸುತ್ತವೆ ಎಂಬುದು ದುಃಖದ ಸಂಗತಿ.

ಇದೇ ತೆರನಾದ ಮತ್ತೊಂದು ಸಮಸ್ಯೆ "ಪ್ರಾಧಾನ್ಯತೆ", "ನೈಪುಣ್ಯತೆ" ಮುಂತಾದ "ತೆ" ಗಳದ್ದು. ಪ್ರಧಾನನ ಭಾವ ಪ್ರಾಧಾನ್ಯ, ನಿಪುಣನ(ಳ) ಭಾವ ನೈಪುಣ್ಯ. 'ಪ್ರಧಾನ' ಮತ್ತು 'ನಿಪುಣ' ಎಂಬ ಪದಗಳಿಗೆ 'ತೆ' ಎಂಬ ಪ್ರತ್ಯಯ ಸೇರಿಸಿ ಪ್ರಧಾನತೆ ಮತ್ತು ನಿಪುಣತೆ ಎಂದು ಬೇಕಾದರೆ ಹೇಳಬಹುದು. ಈ ಪ್ರಯೋಗದಲ್ಲಿ ವಿಶೇಷಣಗಳಾದ ಪ್ರಧಾನ ಮತ್ತು ನಿಪುಣ ಎಂಬ ಪದಗಳು ನಾಮಪದಗಳಾಗುತ್ತವೆ. ಈಗ ಈ ಪದಗಳಿಗೆ - ಉದಾ. ಪ್ರಾಧಾನ್ಯ ಎಂಬ ಪದಕ್ಕೆ "ತೆ" ಎಂಬ ಪ್ರತ್ಯಯ ಸೇರಿಸಿದರೆ "ಪ್ರಧಾನನ ಭಾವದ ಭಾವ" ಎಂಬ ಅರ್ಥ ಉಂಟಾಗುತ್ತದೆ. 'ನೈಪುಣ್ಯತೆ' ಕೂಡ ಹಾಗೆಯೇ. ಇದನ್ನು ಅರ್ಥೈಸಿಕೊಳ್ಳುವ ನನ್ನ ಪ್ರಯತ್ನ ವಿಫಲವಾಗಿ ಇದನ್ನು ಅಪಶಬ್ದಗಳ ಗುಂಪಿಗೆ ಸೇರಿಸಿದ್ದೇನೆ. ನೀವೇನಂತೀರಿ?

ಇನ್ನು ಜಾಹೀರಾತುಗಳಲ್ಲಿ ಕೇಳಿಬರುವ ಕನ್ನಡದ ಬಗ್ಗೆ. ಹಿಂದೆ ಉತ್ಪನ್ನಗಳು ಕಡಿಮೆ ಇದ್ದುದರಿಂದಲೋ ಏನೋ, ಜಾಹೀರಾತುಗಳು ಕಡಿಮೆ ಇರುತ್ತಿದ್ದವು. ಅಲ್ಲಿ ಪ್ರಯೋಗಿಸಿದ ಭಾಷೆ ಕೂಡ ಚೆನ್ನಾಗಿರುತ್ತಿತ್ತು. "ನನ್ನ ನಲ್ಲನ ಹೊಲದಲ್ಲಿ..." ಎಂಬ ರೇಡಿಯೊ-ದ ಜಾಹೀರಾತಿನಲ್ಲಿ ಸ್ವಲ್ಪ ಶಬ್ದಾಲಂಕಾರವೂ ಕಾಣುತ್ತದೆ. ಆ ಜಾಹೀರಾತುಗಳ ದರ್ಜೆ ಅದು. ಆದರೆ ಇಂದು? ಪುನಃ-ಚಿತ್ರೀಕರಣ ದುಬಾರಿಯಾದುದರಿಂದ ಹಿಂದಿಯಲ್ಲೋ ತಮಿಳಿನಲ್ಲೋ ಇರುವ ಜಾಹೀರಾತನ್ನು ಡಬ್ ಮಾಡಲಾಗುತ್ತದೆ. ನಮ್ಮವರು ಅದೇ ರಾಗಗಳಿಗೆ ತಮ್ಮ ಸಾಹಿತ್ಯವನ್ನು ಜೋಡಿಸಿ ಅದನ್ನು ಪ್ರದರ್ಶಿಸುತ್ತಾರೆ. ಕನ್ನಡದಂತೆ ಒತ್ತಕ್ಷರಗಳು ಹಿಂದಿಯಲ್ಲಿ ಇಲ್ಲವಾದ್ದರಿಂದ ಈ ಜಾಹೀರಾತುಗಳು ಕರ್ಣಕಠೋರವಾಗಿರುತ್ತವೆ. ಅದೇ ಸಂಗೀತವನ್ನು ಇಟ್ಟುಕೊಂಡು ಇನ್ನೂ ಚೆನ್ನಾದ ಸಾಹಿತ್ಯವನ್ನು ಅಳವಡಿಸಿ ಹಾಡಲು ಸಾಧ್ಯವಿದೆ. ಉದಾಹರಣೆಗೆ "ಬೆಸೆದಿರಲಿ... ಜೀವನದಾ-ಸಂಪರ್ಕ ಕೊಂಡಿ" ಎಂಬುದನ್ನು 'ಬೆಸೆದಿರಲಿ ಜೀವನದ ಮಧುರ ಬಾಂಧವ್ಯ.." ಎಂಬುದಾಗಿಯೋ, ಅಥವಾ ಇನ್ನೂ ಚೆನ್ನಾಗಿರುವ ಪದಗಳನ್ನು ಬಳಸಿ ಹಾಡಲು ಸಾಧ್ಯವಿಲ್ಲವೇ? ಈ ಕೆಲಸ ಸ್ವಲ್ಪ ಕಷ್ಟ, ಆದರೂ ಕನ್ನಡದಲ್ಲಿರುವ ಸೊಗಸನ್ನು ಉಳಿಸಿಕೊಳ್ಳಲು ಅಷ್ಟಾದರೂ ಪ್ರಯತ್ನ ಪಡಬಹುದು ಎಂದು ನನ್ನ ಭಾವನೆ.

ಇತ್ತೀಚೆಗೆ ಒಬ್ಬ ಹಿರಿಯರು ಸಖೇದರಾಗಿ "ಕನ್ನಡದ ಆಯುಷ್ಯ ಇನ್ನು ಎಪ್ಪತ್ತು-ಎಂಭತ್ತು ವರ್ಷಗಳಷ್ಟು ಮಾತ್ರ ಎಂದು ಅನ್ನಿಸುತ್ತದೆ" ಎಂದು ಹೇಳಿದರು. ಈಗಿನ ಕನ್ನಡದ ಪರಿಸ್ಥಿತಿ ನೋಡಿದರೆ ಅವರು ಹೇಳಿದ್ದು ನಿಜವೆಂದೇ ಅನ್ನಿಸುತ್ತದೆ. ನಮ್ಮ ಪ್ರೀತಿಯ ಕನ್ನಡನುಡಿಯ ಆಯುಷ್ಯವನ್ನು ಹೆಚ್ಚಿಸಲು ನಾವೇನು ಮಾಡಬಹುದು?

ಇದನ್ನೂ ಓದಿ:
Random ramblings: ಎಷ್ಟು ದಿವಸಗಳಾದವು ಬರೆದು!!

24 comments:

ಆರಾಮ್ said...

"ಕನ್ನಡದ ಆಯುಷ್ಯ ಇನ್ನು ೭೦-೮೦ ವರ್ಷಗಳಷ್ಟು ಮಾತ್ರ ಎಂದು ಅನ್ನಿಸುತ್ತದೆ....ನಮ್ಮ ಪ್ರೀತಿಯ ಕನ್ನಡನುಡಿಯ ಆಯುಷ್ಯವನ್ನು ಹೆಚ್ಚಿಸಲು ನಾವೇನು ಮಾಡಬಹುದು?"

ನಿಜವಾಗಿಯುಉ ಏನು ಮಾಡಬಹುದು? ನಿಜವಾಗಿಯುಉ ಮಾಡಲೇಬೇಕೆಂಬ ಹಟ ನಮ್ಮಲ್ಲಿ ನಿಜವಾಗಿಯುಉ ಇದೆಯೇ?

೧.
ವೀವು ಮತ್ತು ನಾನು ಈಗ ಮಾಡುತ್ತಿರುವ ಹಾಗೆ, ಸಾಧ್ಯವಾದಾಗೆಲ್ಲ ಕನ್ನಡ ಬಳಸಬೇಕು; ತಮಿಳರ ತರಹ ಬೇರೆ ನುಡಿಯಾಡಲೇಬಾರದು. ಆಗುತ್ತದೆಯೇ? ಅಂತಹ ಕೆಚ್ಚು ಕನ್ನಡಿಗರಲ್ಲಿದೆಯೇ?

ಇಂಗ್ಲೀಷ್ ನಲ್ಲಿ ನಮ್ಮ ಅನಿಸಿಕೆಗಳನ್ನು ಎಷ್ಟು ಸುಲಭವಾಗಿ, ಸರಾಗವಾಗಿ ಪ್ರಕಟಗೊಳಿಸಬಹುದು, ಕನ್ನಡದಲ್ಲಿ? ಬರಹ ಕೂಡ ಎಷ್ಟು ಕಷ್ಟ! ಭಾಷೆ ನಮಗಾಗಿ ಇದೆಯೋ ಅಥವಾ ನಾವು ಭಾಷೆಗಾಗಿಯೋ? ಭಾಷೆಯ ನಿಜವಾದ ಕೆಲಸವೇನು (function)?

೨.
ಇಂಗ್ಲೀಷ್ ಜನರ ಹಾಗೆ ಸಾಹಸಪ್ರವ್ರತ್ತಿಯನ್ನು ಹೆಚ್ಚಿಸಿಕೊಂಡು ಜಗತ್ತನ್ನೇ ಗೆದ್ದಾಗ ನಾವಾಡುವ ನುಡಿಯೇ ಜಗದಗಲ ಪಸರಿಸುವುದು. ಇದೆಯೇ, ಕನ್ನಡಿಗರಲ್ಲಿ ಈ ಸಾಹಸ, ಆಕ್ರಮಣ ಶೀಲತೆ?

ಮೊನ್ನೆ ಕನ್ನಡ ಹುಡುಗನೊಬ್ಬ ತನ್ನ ತಾಯಿಯೊಡನೆ ವಾದಿಸುತ್ತಿದ್ದ - ತಮ್ಮ ಜಾತಿಯ, ತಮ್ಮ ರಾಜ್ಯದ ಹುಡುಗಿಯನ್ನೇ ಮದುವೆಯಾಗುವ ಒತ್ತಾಯ ಮಾಡಬಾರದು ಎಂದು. ತಾಯಿಯೋ ಕನ್ನಡಬಿಟ್ಟು ಬೇರೆನುಡಿಯಾಡಲಾರಳು, ಮಗನೋ ಒಬ್ಬನೇ ಒಬ್ಬ!

ಇದೆಯೇ ಕನ್ನಡಕ್ಕೆ ಭವಿಷ್ಯ?

ಜಾತಸ್ಯ ಮರಣಂ...

ಇಂಡೋನೇಷ್ಯಾದಲ್ಲಿ ಮೊನ್ನೆ ನಾಲ್ಕು ಭಾಷೆಗಳನ್ನು ಅಧಿಕ್ರತವಾಗಿ ಹೂಳಲಾಯಿತಂತೆ.
<>

ಅರಿಸಮಾಸದ ಬಗ್ಗೆ ಬರೆದಿದ್ದು ಸಂತಸವಾಯಿತು. ಮೊನ್ನೆಯಷ್ಟೇ ಇದರ ಬಗ್ಗೆ ಡಿಎಸ್ ಪುಟಗಳಲ್ಲಿ ಬರೆದಿದ್ದೆ, ಆದರೆ ಇದಕ್ಕೆ ಅರಿಸಮಾಸವೆನ್ನುತ್ತಾರೆ ಎಂದು ಮರೆತಿದ್ದೆ. ಅರಿ= ವೈರಿ, ಪರಸ್ಪರ ಹೊಂದಲಾರದ ?

ಜಗದಗಲ = ಅರಿಸಮಾಸ?

ಕುಮಾರವ್ಯಾಸ ಅರಿಸಮಾಸಪ್ರೇಮಿಯಾಗಿದ್ದ ಎನ್ನುವುದು ಕುತೂಹಲಕಾರಕ.

ಆರಾಮ್ said...

"ಜಿ. ವೆಂಕಟಸುಬ್ಬಯ್ಯನವರು 'ಅಂಗವಿಕಲ' ಎಂಬ ಪದಕ್ಕೆ ಬದಲಾಗಿ 'ವಿಕಲಚೇತನ' ಎಂಬ ಪದವನ್ನು ಸೂಚಿಸಿದ್ದಾರೆ. ಹಾಗೆ ಸೂಚಿಸಿದಾಗ ಅವರು ಪ್ರಾಯಃ ಅನ್ಯಮನಸ್ಕರಾಗಿದ್ದರೇನೋ."

Even Homer nods!

ಶಂಖದಿಂದ ಬಂದ ಮಾತ್ರಕ್ಕೆ ತೀರ್ಥವಾಗಬೇಕೆಂದಿಲ್ಲ ಎಂಬುದಕ್ಕೆ ಒಳ್ಳೆಯ ಉದಾಹರಣೆ!

Anonymous said...

ಕನ್ನಡ, ತೆಲುಗು ಲಿಪಿಗಳಲ್ಲಿ ಸಾಮ್ಯವಿದೆ.ಆದರೆ ನನಗಂತೂ ಕನ್ನಡ ಲಿಪಿಯೇ ಚಂದವೆನಿಸುತ್ತದೆ, ತೆಲುಗರೇಕೆ ಕನ್ನಡಲಿಪಿಯನ್ನು ಬಳಸುವುದಿಲ್ಲ ಎಂದು ಎಷ್ಟೋ ಸಲ ಅಚ್ಚರಿಪಟ್ಟಿದ್ದೇನೆ.

ತಮಿಳು ಭಾಷೆಯಲ್ಲಿ ತಾವೊಮ್ಮೆ ಹಿಂದೆ ಹೇಳಿದಂತೆ ಕೆಲ ಸ್ವರಗಳೇ ಇಲ್ಲ. ಕನ್ನಡ ಗನ್ನಡವಾಗುತ್ತದೆ? ತಮಿಳು, ಮಲೆಯಾಳಿ ಭಾಷೆಗಳು ಕೇಳಲು ಕನ್ನಡದಷ್ಟು ಇಂಪಲ್ಲ.

ರಾಷ್ಟ್ರಭಾಷೆಯಾಗಹೊರಟಿದ್ದ ಹಿಂದಿಯಲ್ಲಿ ಳ ಕಾರವಿಲ್ಲ, ಮಾತ್ರವಲ್ಲ ಸ್ವಂತದ್ದೇ ಆದ ಲಿಪಿ ಕೂಡ ಇಲ್ಲ.

ಹೀಗೆಂದು ಆ ಭಾಷೆಯವರಲ್ಲಿ ಹೇಳಿದರೆ ಅವರು ತಮ್ಮ ಭಾಷೆಗಳ ನ್ಯೂನತೆಗಳನ್ನು ಒಪ್ಪಿಯಾರೇ? ತಮ್ಮದೇ ಸರ್ವೋತ್ತಮ ಎನ್ನಲಾರರೇ?

ಹೆತ್ತವರಿಗೆ ಹೆಗ್ಗಣ ಮುದ್ದು..?

ಹಿಂದಿನ ರಾಷ್ತ್ರಕವಿ ಕುವೆಂಪುರವರು ವಿಶ್ವಮಾನವನ ಆದರ್ಶದ ಬಗ್ಗೆ, ಮನುಷ್ಯನಿರ್ಮಿತ ಗೋಡೆ, ಗಡಿಗಳನ್ನು ಮೀರಿ ಮೇರುವಾಗುವದರ ಬಗ್ಗೆ ಬರೆದಿದ್ದರು ಎಂದು ಕೇಳಿದ್ದೇನೆ.

ವಿಶ್ವಮಾನವನ ವಿಶ್ವಭಾಷೆಯ ಬಗ್ಗೆ ಏನು ಹೇಳಿದ್ದಾರೆ ಎಂಬ ಕುತೂಹಲವಿದೆ.

Bit Hawk said...

Sorry for posting this in english (Dont have Nudi/Baraha installed here!)

Some of the mistakes you are pointed out are very subtle, that I had not observed them till now. But, many newspaper have so many blatant mistakes (that too in headlines) that even a common man like me can notice.

I wonder how you have missed out the movie songs. One usage I can think of is "Aa thara, ee thara, yaa thara" (meaning yaava thara) This "yaa thara" is so pervasive, that it makes you cringe.

I think there are two reasons for this state of Kannada today:
1) People who know good Kannada dont speak Kannada (and they are not much in music, movies, tv or ads)
2) People who speak pathetic Kannada dont stop (they even make music, movies, ads - and that becomes acceptable form of language in the long run)

Kannada will not be extinct, but it would become a bad version called "Hochcha Hosa Kannada" in the long run!

Nanderdu Kaasu (My two cents!)

Bit Hawk said...

I personally believe that we need not forcefully use terms like "tantraamsha" for "software" - it would be better to use the word "software" in Kannada also (remember, we have accepted bus, car, van also!)

It is useless to be in this forceful translation spree - what do we call DVD, podcast, core duo processors? :) [These forcefully created words will just remain in the literary circles and wont be used by the general public]

Here goes my Kaasu number 3 & 4! :D

nIlagrIva said...

ಒಳ್ಳೆಯ ಲೇಖನ. ನನಗನ್ನಿಸಿದ ಭಾವನೆಗಳನ್ನು ಕುರಿತದ್ದೇ ಆಗಿದೆ ಈ ಲೇಖನ.

ಕನ್ನಡದಲ್ಲಿ ಒಂದು ದೊಡ್ಡ ಕೊರತೆಯೆಂದರೆ ಹಳೆಯ ಸಾಹಿತ್ಯವನ್ನು ಮೂಲೆಗುಂಪುಮಾಡಿರುವುದು.

ಕಾಲಿದಾಸ "ಪುರಾಣಮಿತ್ಯೇವ ನ ಸಾಧುಸರ್ವಮ್" (ಹಳೆಯದೆಂದು ಮಾತ್ರ ಒಂದು ಒಳ್ಳೆಯದಾಗುವುದಿಲ್ಲ) ಎಂದು ಹೇಳಿರುವುದನ್ನು ನಮ್ಮ ಕನ್ನಡದ ಧುರೀಣರು - "ಪುರಾಣಮ್ ಸರ್ವಮಸಾಧು" (ಹಳೆಯಾದ ಎಲ್ಲವೂ ಹೊಲಸು, ಆದ್ದರಿಂದ ತ್ಯಾಜ್ಯ) ಎಂದು ತೀರ್ಮಾನಿಸಿರುವ ಹಾಗೆ ಕಾಣುತ್ತದೆ.

ಆದ್ದರಿಂದ ಹಳೆಗನ್ನಡ ನಮಗೆ ಅರ್ಥವಾಗದ ಹಾಗೆ ನಶಿಸಿದೆ. ಎಷ್ಟು ಜನರಿಗೆ ಪಂಪಭಾರತ ನಿಘಂಟಿಲ್ಲದೆ ಅರ್ಥವಾದೀತು? ಕನ್ನಡದ ಪ್ರಾಧ್ಯಾಪಕರಿಗೇ ಇದು ಅಸಾಧ್ಯವಾದಾಗ ಸಾಮಾನ್ಯರಾದಂಥ ನನ್ನಂಥವರಿಗೆ ಹೇಗೆ ಸಾಧ್ಯ?

ತೆಲುಗಿನಲ್ಲಿ ಈಗಲೂ ಕಂದಪದ್ಯ, ಸೀಸಪದ್ಯಗಳನ್ನು ಸವಿಯುವವರು ಬಹಳ ಕಾಣಸಿಗುತ್ತಾರೆ. ಆದರೆ ಕನ್ನಡಿಗರು ಕೇವಲ ಪಾಶ್ಚಾತ್ಯ ಸಾಹಿತ್ಯಪ್ರಕಾರಗಳನ್ನವಲಂಬಿಸಿ ಕಳೆದ ಐವತ್ತು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಹಳೆಯದೆಲ್ಲ ಹೊಲಸು ಎಂಬ ಕೆಟ್ಟ ಧೋರಣೆ ನಮ್ಮ ಸಾಹಿತಿಗಳಲ್ಲಿ, ವಿಶ್ಲೇಷಕರಲ್ಲಿ ಬಂದ ಹಾಗಿದೆ. ಹೊರಗಿನದು ಬೇಡವೆಂದು ನಾನು ಹೇಳುವುದಿಲ್ಲ. ಆದರೆ ನಮ್ಮ ನೆಲದ ಗಿಡವನ್ನೇ ಕಿತ್ತು ಬಿಸುಟು ಮತ್ತೆ ಅದರ ಸುಗಂಧಕ್ಕೆ ಆಸೆಪಡುವುದು ಹಾಸ್ಯಾಸ್ಪದ.

ನನಗಂತೂ ಈಚೆಗೆ ಓದುವ ದಿನಪತ್ರಿಕೆಗಳಲ್ಲಿ, ವಾರ/ಮಾಸಪತ್ರಿಕೆಗಳಲ್ಲಿ, ನೆಟ್ಟಿನಲ್ಲಿ ಎಲ್ಲೂ ಸಹ ಒಂದು ಶಕ್ತಿಸಹಿತವಾದ, ಓದಲೇಬೇಕನ್ನಿಸುವ ಕನ್ನಡ ಕಾಣುತ್ತಲೇ ಇಲ್ಲ. ತೆಲುಗೇ ವಾಸಿ ಅನ್ನಬಹುದು. ಒಂದು ಭಾಷೆಯನ್ನಾಡುವ ಜನಾಂಗದಲ್ಲಿ ಶಕ್ತಿ ಇಲ್ಲದೇ ಹೋದರೆ ನುಡಿಗೆಲ್ಲಿಂದ ತಾನೆ ಬರಬೇಕು?

ಕನ್ನಡದ ಸುಂದರ ವಾಕ್ಯಗಳು ಎಲ್ಲೆಲ್ಲೂ ಕಂಡರೆ ಮನಸ್ಸಿಗೂ ಆಹ್ಲಾದವಾಗುತ್ತದೆ. ಅದರ ಬದಲು ಅಸಹ್ಯಕರ "ಅಂತಃಶಿಸ್ತೀಯ"ದ ರೀತಿಯ ಪದಜೋಡಣೆಗಳು ಕಾಣುವುದಕ್ಕಿಂತ ಇಂಗ್ಲೀಷಿನಲ್ಲಿ ಮಾತನಾಡುವುದು ಒಳಿತು.

ಕನ್ನಡವನ್ನು ಉಳಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಪಂಡಿತರೊಬ್ಬರಿಗೆ ಹಾಕಿದೆ.ಅವರು ಹೇಳಿದ ಉತ್ತರವೇ ನನಗೂ ಈಗ ಮಾದರಿಯಾಗಿದೆ. "ನಾವು ಪ್ರಪಂಚವನ್ನು ಬದಲಾಯಿಸಲು ಆಗುವುದಿಲ್ಲ. ಆದರೆ ನಮ್ಮನ್ನು ನಾವೇ ಬದಲಾಯಿಸಿಕೊಳ್ಳಬಹುದು. ಆದ್ದರಿಂದ ನಾವಿರುವವರೆಗೂ ನಮ್ಮಲ್ಲಿ ವೈಯಕ್ತಿಕವಾಗಿ ಕನ್ನಡ ಉಳಿಯುವ ಹಾಗೆ ನೋಡಿಕೊಳ್ಳಬಹುದು. ನಮ್ಮ ಪರಿಸರದಲ್ಲಿ ಕನ್ನಡವನ್ನುಪಯೋಗಿಸಿದರೆ ನಮ್ಮ ಮನೆಯವರೂ ನೆರೆಹೊರೆಯವರೂ ಕನ್ನಡ ಉಳಿದು ಬೆಳೆವ ಹಾಗೆ ಮಾಡುತ್ತಾರೆ. ಅದರೆ ಮೇಲೆ ನಮ್ಮಿಂದೇನೂ ಆಗದು".

ಮೇಲಿನದು ಮಾಡಬಹುದಾದದ್ದು. ಇದರ ಬದಲು "ಹೋರಾಟ"ದ ಹೆಸರಿನಲ್ಲಿ ಬಸ್ಸುಗಳಿಗೆ ಕಲ್ಲು ತೂರುವುದರಿಂದ ಭಾಷಯೇನೂ ಉಳಿಯುವುದಿಲ್ಲ. ಭಯವನ್ನು ಬಿತ್ತಬಹುದು, ಅಷ್ಟೆ.

ನೀವೇನಂತೀರಿ?

parijata said...

@ಆರಾಮ್,
ಕನ್ನಡಭಾಷೆಯನ್ನು ಉಳಿಸಲು ನನಗೆ ಗೊತ್ತಿರುವ ಒಂದೆರಡು ಮಾರ್ಗಗಳು:
೧) ಕನ್ನಡ ಗೊತ್ತಿರುವವರ ಜೊತೆಯಲ್ಲಾದರೂ ಕನ್ನಡದಲ್ಲಿ ಮಾತನಾಡುವುದು
೨)ಹೆಚ್ಚು ಹೆಚ್ಚು ಸಾಹಿತ್ಯವನ್ನು ಪ್ರಕಟಿಸುವುದು.

ನಿಮ್ಮ ಪ್ರಶ್ನೆ "ಭಾಷೆಯ ನಿಜವಾದ ಕೆಲಸವೇನು (function)?" ಎಂಬುದು ವಿಚಾರಪ್ರಚೋದಕವಾಗಿದೆ. ಇದಕ್ಕೆ ಪ್ರಾಮಾಣಿಕವಾಗಿ ಉತ್ತರಿಸುವ ನನ್ನ ಪ್ರಯತ್ನ (ಈ ಲೇಖನದ ಹಿನ್ನೆಲೆಯಲ್ಲಿ) ಸಫಲವಾಗಲಿಲ್ಲ ! :(

ಮನಸ್ಸುಗಳು ಕೂಡಿದಲ್ಲಿ ಭಾಷೆ ಮುಖ್ಯವಾಗಲಾರದಾದು. ತಾಯಿಯ ಅಳಲು ನನಗೆ ಅರ್ಥವಾದರೂ ಕನ್ನಡದ ಹುಡುಗನ ಬಗ್ಗೆ ನನ್ನ ಸಹಾನುಭೂತಿಯಿದೆ. :)

'ಜಗದಗಲ' ಎಂಬ ಪದಪುಂಜ ಅರಿಸಮಾಸವಲ್ಲ. 'ಜಗದ ಅಗಲ' ಎಂದು ಈ ಲೋಪಸಂಧಿಯನ್ನು ಬಿಡಿಸಬಹುದು.
ಎಲ್ಲಾ ಅರಿಸಮಾಸಗಳೂ ಕಿವಿಗೆ ಹಿಂಸೆಯನ್ನು ಉಂಟುಮಾಡುವುದಿಲ್ಲ. 'ದಾರಿದೀಪ' ಎಂಬ ಪದ ಕೇಳಲು ತೊಂದರೆ ಇಲ್ಲ. ಅದೇ 'ನಿಷ್ಕಾಳಜಿ' ಎಂದು ಹೇಳಿದರೆ - 'ದೇವರೇ ನಮ್ಮ ಕಿವಿಗಳನ್ನು ಕಾಪಾಡಪ್ಪಾ' ಎನ್ನುವ ಹಾಗೆ ಆಗುತ್ತದೆ!

@ಹೆಸರು ಹೇಳಲಿಚ್ಛಿಸದವರೇ,
ಕುವೆಂಪು ಅವರು ವಿಶ್ವಭಾಷೆಯ ಬಗ್ಗೆ ಹೇಳಿದ್ದು ನನಗೆ ತಿಳಿಯದು.
ಹಿಂದಿ ಮತ್ತು ತಮಿಳುಗಳ ಬಗ್ಗೆ ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ. ಬಹಳ ಸಲ ನನಗೆ ಅನ್ನಿಸುತ್ತದೆ ನನ್ನ ಕನ್ನಡ-ಪ್ರೀತಿ ನಾನು ಇಲ್ಲಿ ಹುಟ್ಟಿದ್ದಕ್ಕೇ ಅಲ್ಲವೇ ಎಂದು. ನನ್ನ ಕಿವಿಗೆ ಕನ್ನಡದಷ್ಟು ಇಂಪಾದ ಭಾಷೆ ಬೇರೆ ಯಾವುದೂ ಇಲ್ಲ. ತಮಿಳು ಎಷ್ಟೇ ಒರಟಾದರೂ ತಮಿಳರಿಗೆ ಅದು ಇಂಪಾಗಿ ಕೇಳಿಸುತ್ತದೆಯೇ ಎಂಬುದು ನನ್ನ ಪ್ರಶ್ನೆ. (ಬಿ. ಎಂ. ಶ್ರೀ ಹೇಳಿದ ಉದಾಹರಣೆ - ಶಿಲಪ್ಪದಿಕ್ಕಾರಂ ನಲ್ಲಿ ಕೋವಲ ಕಣ್ಣಗಿಯನ್ನು ಕುರಿತು 'ಎನ್ ಕರುಂಬೇ ತೇನೇ' ಎಂದು ಸಂಬೋಧಿಸುತ್ತಾನಂತೆ. ಈ ಪದಗಳು ಎಷ್ಟು ಮಧುರವಾಗಿವೆ ಎಂದು ಅನ್ನಿಸುವುದಿಲ್ಲವೇ? :)?

@Bit Hawk,
Thanks for your nAlak kaasu :D

You know, I actually had a paragraph about movie songs. I don't get to hear a lot of them however, and I haven't heard the 'ತರಹಾವರಿ' songs. I decided to chuck the paragraph because of my very, very limited knowledge about movies and movie-songs.
I love the song'ಅನಿಸುತಿದೆ ಯಾಕೋ ಇಂದು', but the line 'ಪೂರ್ಣಚಂದಿರ ರಜಾ ಹಾಕಿದ' makes me want to cast a 'muffliato' spell... As you said, people who actually make movies and ads and stuff do not know Kannada at all, and vice versa.

About the other literal-translation-part, I remember Nissar Ahmed joking about calling a shaving brush 'मुख्मण्डन झाडू'. Yes, we cannot translate every new word into our languages. Best thing is to accept them into our language.

@nIlagrIva,
ಕಂದಪದ್ಯ, ಸೀಸಪದ್ಯಗಳನ್ನು ಬರೆಯುವುದು 'ಇಂಗ್ಲಿಷ್ ಗೀತೆಗಳನ್ನು ಬರೆಯುವುದಕ್ಕಿಂತ' ಸಾವಿರ ಪಾಲು ಕಷ್ಟತರ. ಸುಲಭವಾದ ದಾರಿಯನ್ನು ಹುಡುಕುವಲ್ಲಿ ನಿಸ್ಸೀಮರಾದ ನಾವು ಬರೆಯುವ ರೀತಿಯನ್ನು ಬದಲಾಯಿಸಿಕೊಂಡಿದ್ದರಲ್ಲಿ ಆಶ್ಚರ್ಯವೇ ಇಲ್ಲ. ಆದರೆ ನೀವು ಹೇಳುವುದು ನಿಜ. ಹಳೆಯ ಪದ್ಯಪ್ರಕಾರಗಳನ್ನು ಉಳಿಸಿ ಬೆಳೆಸಿದಷ್ಟೂ ಕನ್ನಡ ಬೆಳೆಯುತ್ತದೆ.

ವಾಟಾಳರ ಪಂಕ್ತಿಯನ್ನು ಅನುಸರಿಸಿದರೆ ಕನ್ನಡ ಮಾತನಾಡುವವರು ಇನ್ನೂ ಕಡಿಮೆಯಾಗುತ್ತಾರೆಂಬುದು ನನ್ನ ಬಲವಾದ ನಂಬಿಕೆ. :D

Jagali Bhagavata said...
This comment has been removed by the author.
Jagali Bhagavata said...

software-ಗೆ ಲಘುವರ ಅನ್ನುವ ಬಳಕೆಯನ್ನೂ ಕೇಳಿದ್ದೇನೆ. ಆದರೆ ಅಭಿಯಂತ ಪದ ತೀರ ಅನಾಕರ್ಷಕ.

ಜೆ.ಆರ್.ಲಕ್ಷ್ಮಣರಾವ್ ಮತ್ತು ಅಡ್ಯನಡ್ಕ ಕೃಷ್ಣಭಟ್ ಕನ್ನಡ-ಇಂಗ್ಲಿಷ್ ವಿಜ್ಞಾನ ಪದಕೋಶ ಹೊರತಂದಿದ್ದರು ಕೆಲವು ವರ್ಷಗಳ ಹಿಂದೆ. ಅದರಲ್ಲೂ ಕೂಡ ಹೆಚ್ಚಿನ ಪದಗಳು ಚೆನ್ನಾಗಿರಲಿಲ್ಲ.

ಉಧಯ ಠೀವಿ ವಾರ್ಥೆಯ ಕನ್ನಡ ಚೆನ್ನಾಗಿರತ್ತೆ ಅಂತ ಕೇಳಿದ್ದೆ:-)

Aram said...

ಪರಿಚಯಿಸಲು ಖುಷಿಯಾಗುತ್ತಿದೆ:

"ಹುಚ್ಚು ಮನಸಿನ ಹಲವು ಮುಖಗಳ ಹುಡುಗಿ.. "

http://archana-hebbar.blogspot.com/

(ಈಗ ಜೀವವಿಜ್ನಾನಿ ಅರ್ಚನಾ ಧಾಮಿಯಾಗಿ ಲಂಡನ್ ನಲ್ಲಿ ಇದ್ದಾರೆ ಎಂದು ಅಂದುಕೊಂಡಿದ್ದೇನೆ - ತಪ್ಪು ತಿಳುವಳಿಕೆಯಾಗಿದ್ದರೆ ಕ್ಷಮೆ ಕೋರುತ್ತೇನೆ.)

Anonymous said...

ಚಿಕ್ಕಂದಿನಿಂದ ಓದುವ ಗೀಳು, ಆದರೆ ಕಷ್ಟಪಡುವ ಶಕ್ತಿ, ಮನೋಭಾವವಿರಲಿಲ್ಲ. ಓದು ಜನಪ್ರಿಯ ಕತೆ, ಕಾದಂಬರಿಗಳಿಗಷ್ಟೇ ಸೀಮಿತವಾಗಿತ್ತು ಕಾಲಕಳೆಯುವ ಒಂದು ಸಾಧನವಾಗಿ. ದಶಕಗಳು ಕಳೆದರೂ ಅದೇ ಮನ:ಸ್ತಿತಿ. ಇವೊತ್ತಿಗೂ ಮಂಕುತಿಮ್ಮನನ್ನು ಸರಿಯಾಗಿ ಓದಿಲ್ಲ.

ಇಂಗ್ಲೀಷ್ ನಲ್ಲಿ ಮಕ್ಕಳಿಗಾಗಿ ಹಳೆಯ ಕ್ಲಾಸಿಕ್ ಗಳನ್ನು ಸಂಕ್ಷಿಪ್ತಗೊಳಿಸಿ, ಸುಲಭಶಬ್ದಗಳಲ್ಲಿ ಪುನರ್ ನಿರೂಪಿಸುತ್ತಾರೆ (ರಿಟೋಲ್ಡ್ ಕ್ಲಾಸಿಕ್ಸ್).

ಇದೇರೀತಿ ಕನ್ನಡದ ಹಳೆಯ ರತನಗಳಿಗೆ ಹೊಳಪು ಕೊಟ್ಟು ಆಕರ್ಷಕ ಬಣ್ಣದಚಿತ್ರ,ಮುದ್ರಣಗಳಿಂದ, ಸುಲಭ ನಿರೂಪಣೆಯಿಂದ, ಎಳೆಯ, ಹೊಸ ಓದುಗರ ಮನ ಒಲಿಸುವುದಕ್ಕೆ ಪ್ರಯತ್ನಪಟ್ಟರೆ ಉದ್ದೇಶ ಸಾಧನೆ ಸುಲಭವಾಗಬಹುದೇನೋ.

ಆದರೆ ಮಾಡುವವರಾರು?

Aram said...

"ಕನ್ನಡಭಾಷೆಯನ್ನು ಉಳಿಸಲು ನನಗೆ ಗೊತ್ತಿರುವ ಒಂದೆರಡು ಮಾರ್ಗಗಳು:
೧) ಕನ್ನಡ ಗೊತ್ತಿರುವವರ ಜೊತೆಯಲ್ಲಾದರೂ ಕನ್ನಡದಲ್ಲಿ ಮಾತನಾಡುವುದು
೨)ಹೆಚ್ಚು ಹೆಚ್ಚು ಸಾಹಿತ್ಯವನ್ನು ಪ್ರಕಟಿಸುವುದು."

Pardon my "knotty" comment here!

I prefer English to Kannada most of the time. For me, writing in Kannada means much more effort and time. Yet, occasionally I do bother to make the effort and spend some time for no particular reason other than that Kannada and its literature are more familiar to me than any other language except English.

I wonder what could be the reasons for so many of us blogging in English, in spite of our fluency and affirmed love for Kannada. Even our target readers are Kannadigas mostly.

I wonder about this paradox?

I ought to have drafted this in Kannada, but as I said I felt like being a little...

parijata said...

ಭಾಗವತರೆ,
ಈ ಠೀವಿಯ ವಾರ್ಥೆಗಳೂ ಇಂಧೆ ಬಿದ್ದಿಲ್ಲ! (My feeble attempt at humor!)
@ಆರಾಮ್,
ಅರ್ಚನಾ ಅವರ ಬ್ಲಾಗನ್ನು ಕೆಲವೊಮ್ಮೆ ಓದುತ್ತೇನೆ. ಚೆನ್ನಾಗಿ ಬರೆಯುತ್ತಾರೆ.
ಆಂಗ್ಲವನ್ನು ಬಳಸುವುದಕ್ಕೆ ಕಾರಣಗಳು ಕೆಲವಾರು.
೧) ಕನ್ನಡವನ್ನು ಬರೆಯುವುದು ಸ್ವಲ್ಪ ಕಷ್ಟ.
೨) ಕೆಲವು ವಿಷಯಗಳನ್ನು ಆಂಗ್ಲದಲ್ಲಿ ಇನ್ನೂ ಚೆನ್ನಾಗಿ ಬರೆಯಬಹುದು
೩) ಆಂಗ್ಲದ ಬಗೆಗಿನ ಪ್ರೀತಿ :)

@ಹೆಸರು ಹೇಳಲಿಚ್ಛಿಸದವರೆ,
ಅಮರಚಿತ್ರಕಥೆಯ (ಕೆಲವು?) ಪುಸ್ತಕಗಳು ಕನ್ನಡದಲ್ಲಿಯೂ ಬಂದಿದ್ದವು. ನಿಜ. Retold Classics ನ ರೀತಿಯಲ್ಲಿ ಕನ್ನಡದಲ್ಲಿ ಏನಾದರೂ ಬರೆಯಬೇಕು. ಬರೆಯುವರಾರು? ಬರೆದರೂ ಪ್ರಕಟಿಸುವವರಾರು? ಪ್ರಕಟಿಸಿದರೆ ಓದುವವರು? ನೆನೆದರೆ ಭಯವಾಗುತ್ತದೆ.

Aram said...

So, is Kannada REALLY rotting?

Before jumping to say yes, read the following excerpt from the author's introduction to an interesting book

"QUITE LITERALLY - Problem Words And How To Use Them"

authored by Wynford Hicks and distributed in India by Cambridge University Press (2004).

After reading the excerpt, perhaps you might see that a dynamic language constantly keeps changing. Old Words acquire new meanings, new words keep evolving, old grammar rules might lose relevance, and conservatives might keep hollering that the language is going to the dogs.

If nothing else, you might realize that the complaint is not unique to Kannada but applies to all the languages in use.
xxxxxxxxxxxxx

"......

It’s noticeable that there is something of a divide among those who write about language between the conservatives and the radicals. The conservatives
are committed to standard English;

want to preserve the grammar they were taught at school and extend it
to everybody else;
fight to keep the traditional meaning of words and expressions;
think that dictionaries should be prescriptive rather than descriptive.

The radicals on the other hand,

want to undermine standard English, dismissing it as a mere dialect;
insist that the grammar of ‘uneducated’ people is just as good as taught grammar;
emphasise that words continually change their meaning – they
generally prefer the newer, more popular ones;
think that dictionaries should be descriptive rather than prescriptive.

In their extreme form both these positions are ridiculous and unhelpful. They make the problem of problem words worse.

Take these traditional precepts of old-fashioned teaching:

don’t start a sentence with a conjunction;
don’t end a sentence with a preposition;
don’t split an infinitive.

These instructions derive from the grammar of Latin, which was used as the model by the first English grammarians. None of them apply to modern English. Splitting infinitives and putting prepositions at the end of a sentence and conjunctions at the beginning are now clearly matters of style not grammar.
(And, by the way, to follow none by a plural instead of a singular verb – as I did in the previous paragraph – isn’t a grammatical mistake, either. The belief that it is a mistake is based on the mistaken idea that none always means not one.)

.....
At the same time writing doesn't have to be formal.... Now, thanks to email and text messaging, millions of words are written every day in a loose, unstructured conversational form. Clearly they undermine the rigid speech Vs.Writing division.

............."
<>

December Stud said...

ತುಂಬ ದಿನಗಳಿಂದ ಉತ್ತರಿಸಬೇಕು ಅಂತಿದ್ದೆ.....

ಕನ್ನಡ ಕೆಡುತ್ತಿದೆ, ನಿಜ. ಆದರೆ ಯಾವುದೇ ಭಾಷೆ ಬೆಳೆಯಬೇಕಾದರೆ, ಹೊಸ ಹೊಸ ಪದಗಳ ಆವಿಷ್ಕಾರ ಅತ್ಯಗತ್ಯ. ವ್ಯಾಕರಣವನ್ನು ಕಿಟಿಕಿಯಿಂದ ಕಿತ್ತೆಸೆದು ಹೊಸ ಪ್ರಯೋಗ ಮಾಡುವ ಅಗತ್ಯವಿಲ್ಲ. ನಾನು ಆ ವಾದವನ್ನು ಒಪ್ಪುತ್ತೇನೆ. ಆದರೆ ಅಲ್ಲೊಂದು ಇಲ್ಲೊಂದು, ಕುಮಾರವ್ಯಾಸನ ಮರಿಗಳು ಹುಟ್ಟಿಕೊಂಡರೆ ತಪ್ಪೇನಿಲ್ಲ. ಅಂತಹ ಕೆಲವು ಪದಗಳು ಭಾಷೆಯ ಗತ್ತನ್ನೂ ಹೆಚ್ಚಿಸಬಹುದು.

೧) 'ಪ್ರಾಧಾನ್ಯತೆ' ಯ ಪ್ರಯೋಗವು ನನಗೇನೂ ಕಸಿವಿಸಿ ಮಾಡಿಲ್ಲ. ಪ್ರಾಯಶಃ, ದಿನ ನಿತ್ಯದ ಕನ್ನಡ ಬಳೆಕೆಗೆ ನನ್ನ ಮನಸ್ಸು ಒಗ್ಗಿಹೋಗಿದೆ.
೨) ಇತ್ತೀಚೆಗೆ ನನ್ನ ಬ್ಲಾಗಿನಲ್ಲೊಂದು ಪದ್ಯ ಹಾಕಿದ್ದೆ. ಅದರಲ್ಲಿ 'ವೀರ್ಯಾಳು' ಎನ್ನುವ ಪದವನ್ನು ಉಪಯೋಗಿಸಿದ್ದೇನೆ. ಅದಕ್ಕೆ ಆರಾಮರ ಪ್ರಶ್ನೆಯೂ ಬಂದಿತ್ತು. ನಾನು 'ಹೊಸ' ಪದಗಳನ್ನು ಬಹಳ ಸಳೀಸಾಗಿ ನನ್ನ ಪದ್ಯಗಳಲ್ಲಿ ಬಳಸುತ್ತೇನೆ, ಸಂದರ್ಭೋಚಿತವಾದರೆ.
೩) ಇಲ್ಲೊಂದು ಕನ್ನಡ 'ಸಾಹಿತ್ಯ'ದ ಗುಂಪಿದೆ. ಆ ಗುಂಪಿನಲ್ಲಿರುವ ನಾಟಕಕಾರರೊಬ್ಬರಿಗೆ 'Drama Choreography' ಗೆ ಕನ್ನಡ ಪದ ಬೇಕಾಗಿತ್ತು. 'ನಾಟಕ ಸಂಯೋಜನೆ' ತುಂಬ ಉದ್ದವಾಯಿತಂತೆ. ಸರಿ, ಎಲ್ಲಾ ತರಹ ಹೊಸ ಪದಗಳು ಹುಟ್ಟಿಕೊಂಡವು. ಅದರಲ್ಲಿ, ಒಂದಂತೂ 'ನಾಟ್ಯೋಜನೆ'!!! ಯೋಜನೆ ಎಲ್ಲಿ ಸಂಯೋಜನೆ ಎಲ್ಲಿ? ನನಗಂತೂ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.
೪) ಅದೇ ನಾಟಕಕಾರರಿಗೆ ಇನ್ನೊಂದು ಪದ ಬೇಕಿತ್ತು. ನಾಟಕ ಪ್ರಾರಂಭವಾಗುವ ಮೊದಲು, ವೀಕ್ಷಕರಿಗೆ ನಾಟಕವನ್ನು ಸಮರ್ಪಿಸಬೇಕು ಎನ್ನುವ ಆಸೆ ಅವರಿಗೆ. ಅದಕ್ಕೆ ಅವರ ಪದ ಪ್ರಯೋಗ 'ಆರಂಭಾರ್ಪಣೆ'. ನಾನಿನ್ನೇನು ಹೇಳಲಿ? ಇಂತಹ ಇನ್ನೂ ಎಷ್ಟೋ ಪದಗಳು 'ಸಾಹಿತ್ಯ' ದ ಗುಂಪಿನಲ್ಲಿ ಹುಟ್ಟುತ್ತವೆ :) ಸಿಕ್ಕಾಪಟ್ಟೆ ಮಜಾ ಇದೆ :)
೫) ಸಕ್ಕತ್, ಬೊಂಬಾಟ್ ಮುಂತಾದ ಪದಗಳನ್ನು ಏನು ಮಾಡೋಣ?

Aram said...

Wynford Hicks goes on to ask, "... So what's happening? Does the Queen no longer speak the Queen's English? (paragraph) It makes more sense to say that the Queen's English has changed with (almost)everybody else's and become looser." (Page 227)

The operative word is "looser." Languages across the globe are gradually losing their stiffness and becoming "looser," in keeping with the rapid developments happening in technology and increasing personal freedom.

The quality of the language used also indicates the cultural level of the person using it. Therefore, it is obvious that if we are to improve the quality of the language used, we need to facilitate the improvement in standards of living and life of our lesser brethren. Education holds the key.

Shall we conclude that our focus should be on the contents of our message and not the quality of the medium through which we communicate our messages?

DS: I was happy to see you bothering enough to comment on this.

parijata said...

@Aram,
A few weeks ago, there was an article on Thatskannada.com. The writer said that Kannada was shackled by the rules of grammar and that was not necessary. That is just like the radicals. However, I think there is one difference between Kannada and English (though that difference is vanishing fast, these days). English borrowed heavily from many languages including Latin, Greek, French and Sanskrit (the word bandicoot is supposed to have come from Telugu, pandikukka!). In contrast, Kannada borrows mainly from Sanskrit and Tamil, and a little from Urdu. Therefore, the grammar here is very close to Sanskrit Grammar, and therefore much better defined than English grammar. This is just what I think, and I am open to corrections.

@DS,
ನಿಜ. ಭಾಷೆ ಉಳಿದು ಬೆಳೆಯಬೇಕಾದರೆ ಹೊಸಹೊಸ ಪದಗಳ ಸೃಷ್ಟಿಯಾಗಬೇಕು. ಅಲ್ಲಿ ಇಲ್ಲಿ ಕೆಲವು ತಪ್ಪುಗಳಾದರೂ ಸಾಧ್ಯವಾದಷ್ಟೂ ವ್ಯಾಕರಣಬದ್ಧವಾಗಿಯೇ ಇದ್ದರೆ ಚೆನ್ನ. ಈಗ 'ದಾರಿದೀಪ' ಎಂಬ ಪದವೂ ಅರಿಸಮಾಸವೇ. ಆದರೆ ಎಷ್ಟು ಚೆನ್ನಾಗಿದೆ, ಅಲ್ಲವೆ?

ಮಜಾ, ಸಖತ್, ಖುಷಿ, ಬೊಂಬಾಟ್ ಮುಂತಾದ ಪದಗಳನ್ನು ಸಂದರ್ಭೋಚಿತವಾಗಿ ಉಪಯೋಗಿಸಿದರೆ ಚೆನ್ನಾಗಿಯೇ ಇರುತ್ತದೆ. ಆ ಪದಗಳ ಮೂಲಭಾಷೆಯ ಮೂಲರೂಪವನ್ನು ಹಾಗೆಯೇ ಉಳಿಸಿಕೊಂಡು ಬಳಸಿದರೆ 'ನಾಟ್ಯೋಜನೆ'ಗಿಂತ ಕೋಟಿಪಾಲು ಇಂಪಾಗಿಯೂ ಇರುತ್ತವೆ.

ಆ ಸಾಹಿತ್ಯದ ಗುಂಪಿನ ಬಗ್ಗೆ ಏನು ಹೇಳಿದರೂ ಕಡಿಮೆಯೇ, ಬಿಡಿ!

Joey said...

ಅರಿಸಮಾಸದ ಬಗ್ಗೆ ತಿಳಿದುಕೊಂಡದ್ದು ಚೆನ್ನಾಗಿತ್ತು.
ಒಂದು ಪ್ರಶ್ನೆ ಈಗ "ಸುವರ್ಣ ಕರ್ನಾಟಕ" ಇದೆಯಲ್ಲ ಅದು ಅರಿಸಮಾಸ ಆಗುತ್ತಾ?

ಸುವರ್ಣ ಅನ್ನೋದನ್ನ ದಿನಬಳಕೆಯಲ್ಲಿ ಯಾರೂ ಬಳಸುವುದಿಲ್ಲ ಎಂಬು ಕಾರಣಕ್ಕೆ, "ಸುವರ್ಣ ಕರ್ನಾಟಕ" ಬೇಡ "ಚಿನ್ನದ ಕರ್ನಾಟಕ", ಅಥವಾ "ಬಂಗಾರ ಕರ್ನಾಟಕ" ಇರಲಿ ಅಂತ ಈಚೆಗೆ ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಇತ್ತು.

(ಕರ್ಣಾಟಕ->ಸಂಸ್ಕೃತ, ಕೇಳಲು ಇಂಪಾಗಿರುವುದು), ಕರ್ನಾಟಕ(ಕನ್ನಡ ಪದ, ಕರ್(ಎತ್ತರದ, ಕಪ್ಪಾದ, ಚೆನ್ನಾಗಿರುವ, ನಾಟ(ನಾಡು)).

ಅಂದಹಾಗೆ, ಸಂಪದದಲ್ಲಿ ಹೊಸ ಪದಗಳ ಸುತ್ತ ಅನೇಕ ಚರ್ಚೆಗಳು ನಡೆಯುತ್ತಾ ಇರತ್ತೆ. ಬಿಡುವಿದ್ದಾಗ ಓದ್ತಾ ಇರಿ. ನನ್ನಿ.

Aram said...

How was Kannada faring some 40-60 years ago?

Here is a glimpse excerpted from Dr. M. Shivaram(A great Kannada humorist, popularly known as Raa.Shi.)'s autobiographical book, "Kailasam and I" published in 1969. The late Raa.Shi.was a close associate of the legendary Kailasam (1885-1946)

The book, though out of print, is available with me, if you wish to read or acquire it.

Interestingly, though he had penned some 26 or so books in Kannada, Raa.Shi. chose to write this in English. He has also written another English book titled, Death and The Nachiketas.

(excerpts from pages 99 to 105)

"Kailasam was elected President for the annual meet of the Kannada Sahitya Parishat, to be held at Madras. Apart from other things, the one important task that worried him was the Presidential Speech. The Speech would normally last for about an hour. It would in the usual course of events, cover a wide field in Kannada literature, its achievements and failures, and a plan or suggestions for future guidance. It had to be ready quite early so that it could be printed and distributed to the delegates at the time of the meet. Kailasam was staying with me then, and he passed on the worrying to me. Not the execution of the speech, that was entrusted to Sri Siddavanahalli Krishna Sharma. It is well-known that Sri Krishna Sharma has the gift of collecting the thoughts of others, analyse them, and put them into crisp, simple sentences, so that it would be easily understood by everybody. Kailasam had requested his old friend, Sharmaji to write up the script. But, he had to express his ideas. This is where I came in.

He would sit with me and think aloud, and ask me to clarify them, add to them, or suggest new ideas. Well! In one field I was equal to Kailasam, and that is in the colossal ignorance of Kannada literature, old, mid-period, or new. Like blind leading the blind, I was supposed to aid him in formulating his ideas. When he espied my total helplessness in this matter he would get angry and furious. He said, "I am a Tamilian, and have an excuse not to know Kannada literature. But you are born a Kannadiga, your mother-tongue is Kannada, and your Mother-in-law tongue is also Kannada, and you are a Kannadiga by profession. That is you cannot get on in your profession in Bangalore without knowing Kannada. You have no bloody excuse to be so ignorant." Even when I told him, that I needed no Kannada in my practice, he would not listen. A third of my patients talk to me in Tamil or Telugu and English. Another third in Urdu or Hindi or Hindusthani - to me all are the same -- and of course in English. The last third talk in some language I do not well understand, and they do not seem to understand my replies, and yet they are happy and so I am happy. Where is the need to know Kannada for anyone in Bangalore. "We are all Bharatha Matheya Makkalu and emotions are more important than language! And so on. A Kannadiga is taught English in his babyhood, daddy and mummy are the first words that he lisps. Later on he reads in Anglo-Vernacular Schools, that was the name given to the Primary and Middle Schools in my days. The Anglo came first and the inferior Vernacular came next, a poor second language. So we used to play in English and curse in choice Kannada. Thus we developed a brilliant expressive Kannada, but that could never enter into literature. After we married, the fashion was "Well my dear, my honey, my darling, etc." If you make love in English, and in intense moments revert to the language of sighs, and grunts, and Tarzan, where is the need to know Kannada? But what was the use of explaining all this to Kailasam, he would not listen, because it did not solve his immediate problem. Anyway, he did not cease to cross-examine me. The questions and answers would be somewhat on the following pattern.

"They talk a lot about the greatness and glory of geniuses like Ranna, Pampa, etc. Can you tell me something about them. Some popular and profound sayings which I may quote?"

"No, Sir, I have heard of their names like you have done. But I have not read any of those books, and have not listened to people who talk about them."

"Haalaagi Hoythu, at least do you know some other Poet or author. Do you remember anything they have said. You know what I mean, any of the lesser ones?"

"I am sorry, Sir, I have not heard of any other Poets at all. Apart from Ranna and Pampa and another Pampa or Ranna, I do not think there are other poets. Anyway I have not heard of them."

"Negedu Biddu Hoythu, any one of the Middle Age Poets. Do you remember?"

"I do not know about the Middle Age Poets or Authors. I do not think there were any. If there were I should have heard from them, or about them."

"Damn you and your Kannada. At least do you know any Modern Poets or Authors."

"Oh Yes, Sir, I know K.V. Puttappa, Masthi, Bendre, V.Si., Jahagirdar. Oh Yes, I know any number of them. Shall I make a list, Sir."

"All those people I know personally and intimately. I have heard them, talked to them and discussed with them about Art and Literature. What I wanted from you was any of their pithy and profound sayings that you remember. Anything that has made a lasting impression on you?"

"No, Sir. But if you want I will refer to those books and pick up some quotations."

"Gosh! What a mistake I made in thinking that you knew something about Kannada literature. I have been telling people so. What a crass ass you are!"

The above specimen conversation will give you an idea of my contribution to the Presidential Address. Kailasam thereafter stuck out a new path, and decided to talk from his heart. He had a lot to tell, and Krishna Sharma very easily got into his Mano-Dharma, and did an excellent job of getting up the printed Presidential Address. The actual speech he delivered was of course ex tempore and did not have much to do with what was written and printed.

......................

In Madras when I heard his Ex Tempore speech I found that he had improved quite a lot on the written speech. The one-sided discussions he had with me and others must have enabled him to enlarge the scope and manner of presentation of his basic ideas and thoughts. But being a Tamilian he would be in a great hurry to express his flowing and rushing ideas. A Telugu man would have sung out his words sonorously and at leisure. The Kannadiga is midway between these two. But Kailasam was talking in Kannada, in a Tamilian hurry. He expected his audience to be very quick on the up-take and follow him. Alas! This was impossible. We, Kannadigas, are capable of understanding everything, give us time, don't rush us up. Where is the need for all that hurry?

Slow and sure wins the race. I sometimes wonder if the tortoise in "The Tortoise And Hare" story was a Kannada tortoise and the Hare a Tamil one! And the story was originated by a slow and sure Kannadiga, being sure that his language would not be understood by the Tamilian. True, the old Kannada Hale-Gannada and old Tamil have a lot in common. But we are grown up now, and outgrown our roots, haven't we? Those that are born from the same root have a tendency later on when grown up, to branch out on their own paths. The same as in Nature and Evolution. The birds and reptiles started from the same root. When fully developed they started quarrelling. The early bird catches the worm, and the reptile loves to eat the eggs of the birds!

Bear with us, please, the hurrying ones. We Kannadigas will catch up with you."
<>

parijata said...

ಬಹಳ ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಜೋಯಿಯವರೆ,
'ಸುವರ್ಣಕರ್ಣಾಟಕ' ಎಂಬ ಪದ ನನಗೆ ತಿಳಿದಂತೆ ಅರಿಸಮಾಸವಲ್ಲ. ಅಲ್ಲ, ಯಾವುದಾದರೂ ಪದವನ್ನು "ದಿನಬಳಕೆಯಲ್ಲಿಲ್ಲ" ಎಂಬ ಸಬೂಬು ಹೇಳಿ ಅದನ್ನು ಉಪಯೋಗಿಸದಿದ್ದರೆ ಆ ಪದದ ಆಯುಷ್ಯ ಅಲ್ಲಿಗೆ ಮುಗಿದೇ ಹೋಯಿತು! ಸ್ವಲ್ಪ ಪ್ರಯತ್ನಪಟ್ಟು ಹೊಸಹೊಸ ಪದಗಳನ್ನು ಉಪಯೋಗಿಸಿದರೆ ಭಾಷೆ-ಸಾಹಿತ್ಯಗಳು ಉಳಿದು ಬೆಳೆಯುತ್ತವೆ, ಇಲ್ಲದಿದ್ದರೆ ಇಲ್ಲ!

@Aram,
Thanks for the informative and yet humorous anecdote. I have great respect for Kailasam. I had heard about Ra.Shi but had not read any of his works.
K.V.Iyer, the author of works like 'shAntalA' and 'rUpadarshi' was a body builder at first. When he showed Kailasam his abs, Kailasam remarked "ಹೋಟಲಲ್ಲಿ ಇಡ್ಲಿ ರುಬ್ಬೋ ಕೆಲಸ ಸಿಗತ್ತೆ!". K.V.Iyer then got drawn towards writing, and we have the superb works written by him.

Yes, we Kannadigas are tortoises. But we can be sure that we are safe from harm as long as we are steady! The question is whether we are steady.

Aram said...

Thanks for bringing up the name of the legendary, Mr. World, Kolar Venkatesha Iyer. His Rupadarshi, Shantala, Samudyata were and still are classics.

I had the good fortune of meeting him some 33 years ago when he was in his seventies. I am still grateful to him because he gave me a vision of my own end.

One of his body-building disciples was the late Mr. A. T.Kannan who later migrated to Kolkotta and Bengalized his name to A.T. Kanan and married a Bengali, Malobika. The two were my favorite Hindustani singers and she is still associated with the Sangeet Research Academy run by ITC in a gurukula system.

I wonder if you have read his collection of short stories, Samudyata. Sheer delight!

parijata said...

@Aram,
I have not read samudyatA, but I must buy it soon. I have read shAntalA and rUpadarshi multiple times, and each time the latter moves me to tears. And each time, I think what might have happened if he had stuck to bodybuilding.

I re-read your comment (the one written by Ra.shi) and each time, Kailasam never fails to make one smile!

Aram said...

Rupadarshi was based upon a small story "The Face Of Judas Iscariot" which KV Iyer read in an old Reader's Digest.

May I please present the rare book, "Kailasam and I" to you both?

Except for my aunt and me, there is no one else in our family who care about old Kannada books, and I believe the book will find a good home at yours.

parijata said...

@Aram,
Thanks for the present, and for thinking that your book will find a good home in ours. It is really nice of you.